ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ 9 ಜನರನ್ನು ನೂತನ ಸದಸ್ಯರನ್ನು ನೇಮಕ ಮಾಡಿ ಸರ್ಕಾರ ಆದೇಶ ಮಾಡಿದ್ದು ವ್ಯವಸ್ಥಾಪನಾ ಸಮಿತಿಗೆ ನೂತನ ಅಧ್ಯಕ್ಷರ ಆಯ್ಕೆ ದೇವಳದಲ್ಲಿ ಫೆ.24ರಂದು ನಡೆಯಿತು.
ಅಧ್ಯಕ್ಷರಾಗಿ ಕೇಶವ ಉಳುವಾರು ಕೊಳಲುಮೂಲೆ ಆಯ್ಕೆಗೊಂಡಿದ್ದಾರೆ.
ಯು.ಕೆ.ತೀರ್ಥರಾಮ ಪರ್ನೋಜಿ, ವಸಂತ ಪೆಲಡ್ಕ, ಬಾಲಕೃಷ್ಣ ಕುಂಟುಕಾಡು, ತಿಮ್ಮಯ್ಯ ಮೆತ್ತಡ್ಕ, ಸತ್ಯಪ್ರಸಾದ್ ಗಬ್ಬಲ್ಕಜೆ, ಚಂಚಲಾಕ್ಷಿ ಕುಲ್ಟಾರು, ಮಾಲತಿ ಭೋಜಪ್ಪ ಹಾಸ್ಸಾರೆ ಮತ್ತು ದೇವಸ್ಥಾನದ ಪ್ರಧಾನ ಅರ್ಚಕ ಕೇಶವಮೂರ್ತಿ ನೂತನ ವ್ಯವಸ್ಥಾಪನ ಸಮಿತಿ ಸದಸ್ಯರಾಗಿರುತ್ತಾರೆ.
ಕೇಶವ ಕೊಳಲುಮೂಲೆಯವರನ್ನು ವಸಂತ ಪೆಲ್ತಡ್ಕ ಸೂಚಿಸಿ ಸತ್ಯಪ್ರಕಾಶ್ ಗಬ್ಬಲ್ಕಜೆ ಅನುಮೋದಿಸಿದರು.ಕಾರ್ಯನಿರ್ವಾಹಕಧಿಕಾರಿ ಅವಿನ್ ರಂಗತ್ ಮಲೆ ಅಧ್ಯಕ್ಷರ ಆಯ್ಕೆ ಪ್ರಕಿಯೆ ನಡೆಸಿಕೊಟ್ಟರು.ದೇವಳದ ವ್ಯವಸ್ಥಾಪಕರಾದ ಆನಂದ ಕಲ್ಲಗದ್ದೆ ಉಪಸ್ಥಿತರಿದ್ದರು.
ತೊಡಿಕಾನ ಮಲ್ಲಿಕಾರ್ಜುನ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕೇಶವ ಕೊಳಲುಮೂಲೆ ಆಯ್ಕೆ
