ಸುಳ್ಯ ತಾಲೂಕಿನ ಗ್ರಾಮದ ಮೇನಾಲದಲ್ಲಿ ಸ್ಕೂಟಿ ಚಲಾಯಿಸಿಕೊಂಡು ತೆರಳುತ್ತಿದ್ದ ಯುವಕನಿಗೆ ಕಾಡು ಹಂದಿ ಅಡ್ಡಬಂದು ಸ್ಕೂಟಿ ಪಲ್ಟಿಯಾಗಿ ಯುವಕ ಗಾಯಗೊಂಡ ಘಟನೆ ಗುರುವಾರ ವರದಿಯಾಗಿದೆ.
ಮೇನಾಲದಲ್ಲಿ ಫಾಸ್ಟ್ ಫುಡ್ ನಡೆಸುತ್ತಿರುವ ಭಾಸ್ಕರರವರು ಫೆ.27ರಂದು ರಾತ್ರಿ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ರಬ್ಬರ್ ಕೂಪ್ ಒಳಗಿನಿಂದ ದೊಡ್ಡ ಗಾತ್ರದ ಹಂದಿಯೊಂದು ರಸ್ತೆಗೆ ಬಂತೆಂದೂ ಅದೇ ಸಮಯಕ್ಕೆ ಸ್ಕೂಟಿಯೂ ಬಂದು ಹಂದಿ ಗುದ್ದಿತೆನ್ನಲಾಗಿದೆ.
ಪರಿಣಾಮ ಭಾಸ್ಕರರಿಗೆ ಕೈ ಗೆ ಗಾಯವಾಗಿದೆ. ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆದಿದ್ದಾರೆ.
ಸ್ಕೂಟರ್ ಗೆ ಕಾಡು ಹಂದಿ ಗುದ್ದಿ ಸ್ಕೂಟರ್ ಸವಾರ ಆಸ್ಪತ್ರೆಗೆ ದಾಖಲು
