ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದಾತನನ್ನು ಸಾರ್ವಜನಿಕರು ರಕ್ಷಿಸಿದ ಘಟನೆ ಪಾಣೆಮಂಗಳೂರು ಸೇತುವೆಯಲ್ಲಿ ನಡೆದಿದೆ.
ಬೆಂಗಳೂರಿನ ಕತ್ರಿಗುಪ್ಪೆ ಮುಖ್ಯ ರಸ್ತೆ ನಿವಾಸಿ ವೆಂಕಟಯ್ಯ ಎಂಬವರ ಪುತ್ರ ಶಂಕರಯ್ಯ (50) ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಶಂಕರಯ್ಯ ಆತ್ಮಹತ್ಯೆ ಉದ್ದೇಶಕ್ಕಾಗಿಯೇ ಬೆಂಗಳೂರಿನಿಂದ ಬಂಟ್ವಾಳಕ್ಕೆ ಬಂದಿದ್ದರು ಎನ್ನಲಾಗಿದೆ. ಮಾಹಿತಿ ಪಡೆದ ಕೂಡಲೇ ಕಾರ್ಯಾಚರಣೆ ನಡೆಸಿದ ಸಿದ್ದೀಕ್ ಎಂ.ಕೆ.ರೋಡ್, ಶಂಕರಯ್ಯ ಅವರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದರು. ಉಪವಾಸವಿದ್ದ ಸಂದರ್ಭ ನಡೆಸಿದ ರಕ್ಷಣಾ ಕಾರ್ಯಕ್ಕೆ ಸಾರ್ವಜನಿಕರು ಅಭಿನಂದಿಸಿದ್ದಾರೆ.
ಆತ್ಮಹತ್ಯೆ ಯತ್ನಕ್ಕೆ ವೈಯಕ್ತಿಕ ಸಮಸ್ಯೆಯೇ ಕಾರಣ ಎಂದು ತಿಳಿದು ಬಂದಿದೆ. ನಂತರ ಆತನನ್ನು ಪೊಲೀಸರಿಗೆ ಹಸ್ತಾಂತರಿಸಲಾಯಿತು.ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾ ಎಕ್ಸ್‌ಪ್ರೆಸ್‌ನ ವಾಟ್ಸಾಪ್ ಗ್ರೂಪಿಗೆ ಸೇರಲು ಕ್ಲಿಕ್ ಮಾಡಿ
ನದಿಗೆ ಹಾರಿ ಆತ್ಮ ಹತ್ಯೆಗೆ ಯತ್ನಿಸಿದಾತನನ್ನು ತಡೆದ ಸಾರ್ವಜನಿಕರು
