ಚೆಂಬು ಗ್ರಾಮದ ಊರುಬೈಲಿನಲ್ಲಿ ರಬ್ಬರ್ ಸ್ಮೋಕ್ ಹೌಸ್ ಗೆ ಬೆಂಕಿ ತಗುಲಿ ಸಂಪೂರ್ಣ ನಾಶವಾದ ಘಟನೆ ಬುಧವಾರ ರಾತ್ರಿ ನಡೆದಿದೆ.
ಊರು ಬೈಲಿನ ಎಕ್ಕಡ್ಕ ಚರಿತ ಅವರ ಮನೆಯ ರಬ್ಬರ್ ಸ್ಮೋಕ್ ಹೌಸ್ ಗೆ ಬೆಂಕಿ ತಗುಲಿದ್ದು ಅಪಾರ ಪ್ರಮಾಣದ ರಬ್ಬರ್ ಸೀಟುಗಳು ಸುಟ್ಟು ಹೋಗಿವೆ. ಘಟನಾ ಸ್ಥಳಕ್ಕೆ ಸ್ಥಳೀಯರು , ಸುಳ್ಯ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ ಎಂದು ತಿಳಿದು ಬಂದಿದೆ.
ರಬ್ಬರ್ ಸ್ಮೋಕ್ ಹೌಸ್ ಗೆ ಬೆಂಕಿ : ಅಪಾರ ಪ್ರಮಾಣದ ರಬ್ಬರ್ ನಾಶ
