ಬೆಳಗಾವಿ ನಗರದಲ್ಲಿ ಪಾಗಲ್
ಮಿಯೋರ್ವ ಪ್ರೇಯಸಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಸಹಾಪುರದಿಂದ ಮಂಗಳವಾರ ವರದಿಯಾಗಿದೆ.
ಐಶ್ವರ್ಯ ಮಹೇಶ ಲೋಹಾರ (18) ಕೊಲೆಯಾದ ಯುವತಿ. ಕುಳ್ಳೂರು ಗ್ರಾಮದ ಪಾಗಲ್ ಪ್ರೇಮಿ ಪ್ರಶಾಂತ ಯಲ್ಲಪ್ಪ ಮಂಡೇಕರ (29) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪ್ರೇಯಸಿಯ ಚಿಕ್ಕಮ್ಮನ ಮನೆಗೆ ಬಂದ ಪ್ರಶಾಂತ ಪ್ರೇಯಸಿಯನ್ನು ಮದುವೆ ಆಗುವುದಾಗಿ ಕೇಳಿದ್ದಾನೆ. ಇದಕ್ಕೆ ಒಪ್ಪದ ಪ್ರೇಯಸಿಗೆ ವಿಷ ಕುಡಿಸಲು ಯತ್ನಿಸಿದ್ದಾನೆ. ಇದನ್ನು ನಿರಾಕರಿಸಿದ್ದಾಗ ಪ್ರೇಯಸಿಯ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ನಂತರ ತನ್ನ ಕತ್ತಿಗೆ ತಾನೇ ಚಾಕುನಿಂದ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರೇಯಸಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ತಾನು ಆತ್ಮ ಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ
