ಸುಳ್ಯದ ಬೂಡು ಶ್ರೀ ಸತ್ಯಪದಿನಾಜಿ, ಕುಪ್ಪೆ ಪಂಜುರ್ಲಿ ಮತ್ತು ಸಾನಿಧ್ಯ ಗುಳಿಗ ದೈವಗಳ ದೈವಸ್ಥಾನದ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಮಾ.15 ಮತ್ತು ಮಾ.16ರಂದು ನಡೆಯಲಿರುವುದು ಎಂದು ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಎನ್.ಎ.ರಾಮಚಂದ್ರ, ಅಧ್ಯಕ್ಷ ಬೂಡು ರಾಧಾಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ ಹೇಳಿದ್ದಾರೆ.
ಅವರು ಸುಳ್ಯ ಪ್ರೆಸ್ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸುಮಾರು ವರ್ಷಗಳಿಂದ ಬೂಡುವಿನಲ್ಲಿ ಈ ಭಾಗದ ಜನರು ದೈವಗಳ ಆರಾಧನೆ ಮಾಡಿಕೊಂಡು ಬರುತ್ತಿದ್ದಾರೆ. ಇದೀಗ ದೈವಸ್ಥಾನ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವಕ್ಕೆ ಅಣಿಯಾಗುತ್ತಿದೆ. ಮಾ.15ರಂದು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆಯಾಗಿ ಉಗ್ರಾಣ ತುಂಬಿಸುವ ಕಾರ್ಯಕ್ರಮ ನಡೆಯಲಿದೆ.
ನಂತರ ಸುಳ್ಯ ಚೆನ್ನಕೇಶವ ದೈವಸ್ಥಾನದ ವಠಾರದಿಂದ ಹಸಿರುವಾಣಿ ಹೊರಡಲಿದೆ. ಮಧ್ಯಾಹ್ನ ಬಳಿಕ ಭಜನೆ ನಡೆಯುವುದು. ಸಂಜೆ ಕ್ಷೇತ್ರಕ್ಕೆ ತಂತ್ರಿಗಳ ಆಗಮನವಾಗುವುದು. ಬಳಿಕ ವೈದಿಕ ಕಾರ್ಯಕ್ರಮ ಆರಂಭಗೊಳ್ಳುವುದು.
ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ರಾಜೇಶ್ ಶೆಟ್ಟಿ ಮೇನಾಲ ಧಾರ್ಮಿಕ ಉಪನ್ಯಾಸ ನೀಡುವರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ.
ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತುಳುನಾಡ ಸತ್ಯೋಲು ಕಾನದ ಕಟದೆರ್ ತುಳು ಯಕ್ಷಗಾನ ಪ್ರದರ್ಶನಗೊಳ್ಳುವುದು.
ಮಾ.16ರಂದು ಬೆಳಗ್ಗೆ ಯಿಂದ ವೈದಿಕ ಕಾರ್ಯಕ್ರಮಗಳು ನಡೆಯುವುದು. ಬೆಳಗ್ಗೆ ವೃಷಭ ಲಗ್ನದಲ್ಲಿ ಪ್ರತಿಷ್ಟೆ, ಕಲಶಾಭಿಷೇಕ ನಡೆಯುವುದು.
ಈ ದಿನ ಸಂಜೆ ಧಾರ್ಮಿಕ ಸಭೆ ನಡೆಯಲಿದ್ದು ಶಾಸಕಿ ಭಾಗೀರಥಿ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆರ್ಯನ್ ಮ್ಯೂಸಿಕಲ್ಸ್ ಸುಳ್ಯ ಇವರಿಂದ ಸಂಗೀತ ರಸಮಂಜರಿ. ಡಾನ್ಸ್ ಧಮಾಕ ನಡೆಯುವುದು. ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ವೈಭವ ನಡೆಯುವುದು.
ಬ್ರಹ್ಮಕಲಶೋತ್ಸವ ಪ್ರಯುಕ್ತ ಎರಡೂ ದಿನವೂ ಅನ್ನಸಂತರ್ಪಣೆ ಇರುತ್ತದೆ.
ಮಾ.18ರಂದು ಮಂಗಳವಾರ ದೈವಗಳ ನೇಮೋತ್ಸವ ನಡೆಯಲಿದೆ ಎಂದು ಹೇಳಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಬೂಡು, ಕಾರ್ಯದರ್ಶಿ ಪ್ರವೀಣ್ ಉಪಸ್ಥಿತರಿದ್ದರು
.