ಬೆಂಗಳೂರು: ರಾಜ್ಯ ನಕ್ಸಲ್ ಮುಕ್ತವಾಗಿರುವುದರಿಂದ
ನಕ್ಸಲ್ ನಿಗ್ರಹ ಪಡೆಯನ್ನು ವಿಸರ್ಜನೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. 16ನೇ ಬಜೆಟ್ ಮಂಡಿಸಿದ ಸಿಎಂ, ನಮ್ಮ ಸರ್ಕಾರದ ಅವಧಿಯಲ್ಲಿ 6 ಜನ ಭೂಗತ ನಕ್ಸಲರು ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಯೋಜನೆ ಸಮಿತಿಯ ಮುಂದೆ ಶರಣಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ದಳ ವಿಸರ್ಜನೆ ಮಾಡುವುದಾಗಿ ಹೇಳಿದ್ದಾರೆ.
ಕಳೆದ ಫೆ.7ರಂದು ನ್ಯೂಸ್ ಕಾರ್ಕಳ ವೆಬ್‌ಸೈಟ್ ರಾಜ್ಯ ನಕ್ಸಲ್ ಮುಕ್ತ-ಎಎನ್‌ಎಫ್ ಮುಂದಿನ ಕಾರ್ಯವೇನು ಎಂಬ ಶೀರ್ಷಿಕೆಯಲ್ಲಿ ಈ ಕುರಿತು ವಿಶೇಷ ವರದಿ ಪ್ರಟಿಸಿತ್ತು.
ಶರಣಾಗಿರುವ ನಕ್ಸಲರನ್ನು ಮುಖ್ಯವಾಹಿನಿಗೆ ಸೇರ್ಪಡೆಗೊಳಿಸಲು, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮೂಲಸೌಕರ್ಯ ಒದಗಿಸಲು 10 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ರೂಪಿಸುವುದಾಗಿ ತಿಳಿಸಿದರು
ರಾಜ್ಯದಲ್ಲಿ ನಕ್ಸಲ್ ಪಡೆ ವಿಸರ್ಜನೆ
