ಗೌಡರ ಯುವ ಸೇವಾ ಸಂಘ (ರಿ) ಸುಳ್ಯ ತಾಲೂಕು,ತೊಡಿಕಾನ ಗ್ರಾಮ ಸಮಿತಿ ವತಿಯಿಂದ
(10 ಕುಟುಂಬ 18 ಗೋತ್ರದ ವ್ಯಾಪ್ತಿಗೆ ಒಳಪಟ್ಟಂತೆ)
ಸುಳ್ಯ ತಾಲೂಕು ಮತ್ತು ಕಡಬ ತಾಲೂಕಿನ ಸೀಮಿತ ಗ್ರಾಮಗಳಿಗೆ
ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟ ಫೆ.8ರಂದು
ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಮೈದಾನದಲ್ಲಿ ಉದ್ಘಾಟನೆಗೊಂಡಿದೆ.
ಶ್ರೀ ಅಕ್ಷಯ್ ಕುರುಂಜಿ ಆರ್ಕಿಟೆಕ್ಟ್
ಎ.ಓ.ಎಲ್.ಇ.(ರಿ.),ಕುರುಂಜಿಭಾಗ್, ಸುಳ್ಯ ಇವರು ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಶ್ರೀ ಬಿ. ರಮಾನಂದ ಗೌಡ ಬಾಳೆಕಜೆ ಅಧ್ಯಕ್ಷರು, ಗೌಡರ ಯುವ ಸೇವಾ ಸಂಘ ತೊಡಿಕಾನ ಗ್ರಾಮ ಅಧ್ಯಕ್ಷತೆ ವಹಿಸಲಿದ್ದರು
ಅರಂತೋಡು ತೊಡಿಕಾನ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಡಾ.ಲಕ್ಷ್ನೀಶ,ಪಿ.ಎಸ್.ಗಂಗಾಧರ, ಅಧ್ಯಕ್ಷರು, ಗೌಡ ಯುವ ಸೇವಾ ಸಂಘ (ರಿ), ಸುಳ್ಯ,ಪಿ.ಸಿ.ಜಯರಾಮ ನಿಕಟಪೂರ್ವ ಅಧ್ಯಕ್ಷರು, ಕರ್ನಾಟಕ ರಾಜ್ಯ ಅರೆಭಾಷೆ ಅಕಾಡೆಮಿ, ವಿನುತ ಪಾತಿಕಲ್ಲು, ಅಧ್ಯಕ್ಷರು ತಾಲೂಕು ಮಹಿಳಾ ಗೌಡರ ಘಟಕ,ಕಿಶೋರ್ ಕುಮಾರ್, ನಿಕಟಪೂರ್ವ ಅಧ್ಯಕ್ಷರು, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನ, ವೆಂಕಟ್ ವಳಲಂಬೆ, ಆಡಳಿತ ಮೊತ್ತೇಸರರು, ಶ್ರೀ ಮುತ್ತಪ್ಪ ತಿರುವಪ್ಪ ದೈವಸ್ಥಾನ ಗುತ್ತಿಗಾರು ಹರೀಶ್ ಕಂಜಿಪಿಲಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ದಾಮೋದರ ನಾರ್ಕೋಡು, ವಲಯ ಉಸ್ತುವಾರಿಗಳು, ಗೌಡ ಯುವ ಸೇವಾ ಸಂಘ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಪ್ರಶಾಂತ್ ಕಾಫಿಲ ನಿರ್ದೇಶಕರು ಆರಂತೋಡು ತೊಡಿಕಾನ ಪ್ರಾಕೃ.ಪ.ಸ.ಸಂಘ ಲೋಚನಾ ಲೋಕೇಶ್ ಉಳುವಾರು ಕೊಳಲುಮೂಲೆ ನಿರ್ದೇಶಕರು, ಅರಂತೋಡು ತೊಡಿಕಾನ ಪ್ರಾ.ಕೃ.ಪ.ಸ.ಸಂಘ,ಜಯಾನಂದ ಕಾಡುಪಂಜ
ನಿವೃತ್ತ ಇ.ಯಂ.ಇ. ಇಂಡಿಯನ್ ಆರ್ಮಿ ಇವರನ್ನು ಸನ್ಮಾನಿಸಲಾಯಿತು.
ಚಿದಾನಂದ ಕಾಡುಪಂಜ ಸ್ವಾಗತಿಸಿದರು.
ರಾಧಕ್ರಷ್ಣ ಪಾರೆಮಜಲು ವಂದಿಸಿದರು.ಲೋಕೇಶ್ ಊರುಬೈಲ್ ಕಾರ್ಯಕ್ರಮ ನಿರೂಪಿಸಿದರು.ಕು.ವಿಭಾ ಕುಂದಲ್ಪಾಡಿ ಪ್ರಾರ್ಥಿಸಿದರು.