ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ವಲಯದ ಕಲ್ಮಕಾರು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘ(ನಿ.) ಇದರ ಕಟ್ಟಡ ರಚನೆಗೆ ಶ್ರೀ ಕ್ಷೇತ್ರದಿಂದ ರೂ.2,00,000/- ಮೊತ್ತ ಅನುದಾನ ಮಂಜೂರಾಗಿದ್ದು, ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಂಜೂರಾತಿ ಪತ್ರವನ್ನು ವಿತರಣೆ ಮಾಡಲಾಯಿತು. ಕಟ್ಟಡದ ಉಧ್ಘಾಟನೆಯನ್ನು ಶ್ರೀ ಕೆ.ಪಿ ಸುಚರಿತ ಶೆಟ್ಟಿ ಅಧ್ಯಕ್ಷರು ದ.ಕ ಹಾಲು ಒಕ್ಕೂಟ ಮಂಗಳೂರು ಇವರು ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಶ್ರೀ ಗಣೇಶ್ ಕೆ ಎಸ್ ಅಧ್ಯಕ್ಷರು ಹಾಲು ಉತ್ಪಾದಕರ ಸಹಕಾರಿ ಸಂಘ ಕಲ್ಮಕಾರು ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಎಸ್ ಪಿ. ಜಯರಾಮ ರೈ ಬಳಜ್ಜ ಉಪಾಧ್ಯಕ್ಷರು, ದ.ಕ ಹಾಲು ಒಕ್ಕೂಟ ಮಂಗಳೂರು, ಶ್ರೀ ವಿವೇಕ್ ಡಿ. ವ್ಯವಸ್ಥಾಪಕರು ನಿರ್ದೇಶಕರು, ದ.ಕ. ಹಾಲು ಒಕ್ಕೂಟ ಮಂಗಳೂರು, ಶ್ರೀಮತಿ ಮೋಹಿನಿ ಕಟ್ಟಿ ಅಧ್ಯಕ್ಷರು, ಗ್ರಾ. ಪಂ. ಕೊಲ್ಲಮೊಗ್ರ, ಶ್ರೀ ಮಾಧವ ಗೌಡ ಯೋಜನಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಸುಳ್ಯ, ಶ್ರೀ ಕೆ.ಜಿ. ಸತೀಶ್ ಕುಮಾರ್ ಕೊಪ್ಪಡ್ಕ ಸ್ಥಾಪಕಾಧ್ಯಕ್ಷರು, ಕಲ್ಕಕಾರು ಹಾಲು ಉತ್ಪಾದಕರ ಸಹಕಾರಿ ಸಂಘ, ಶ್ರೀ ಕೆ. ಬಾಲಕೃಷ್ಣ ಕೊಪ್ಪಡ್ಕ ಮನೆ, ಶ್ರೀ ಕೆ. ಶೇಷಪ್ಪ ಗೌಡ ಕೊಪ್ಪಡ್ಕ ಉಪಾಧ್ಯಕ್ಷರು ಹಾ.ಉ.ಸ್ವಸಂಘ ಕಲ್ಮಕಾರು, ಡಾ| ರವಿರಾಜ್ ಉಡುಪ ವ್ಯವಸ್ಥಾಪಕರು, ಶೇಖರಣೆ ಮತ್ತು ತಾಂತ್ರಿಕ ವಿಭಾಗ, ದಕ. ಹಾಲು ಒಕ್ಕೂಟ ಮಂಗಳೂರು, ಕೆ. ರಾಧಾಕೃಷ್ಣ ಬಿಲ್ಲಾರಮಜಲು ನಿಕಟಪೂರ್ವ ಅಧ್ಯಕ್ಷರು, ಕಲ್ಕಕಾರು ಹಾಲು ಉತ್ಪಾದಕರ ಸಹಕಾರಿ ಸಂಘ, ಶ್ರೀ ಅನಂತರಾಮ ಮಣಿಯಾನ ಮನೆ C.E.O, ಕೊಲ್ಲಮೊಗ್ರ ಹರಿಹರ ಕೃಷಿ ಪತ್ತಿನ ಸಹಕಾರಿ ಸಂಘ (ನಿ.) ಗುತ್ತಿಗಾರು, ಶ್ರೀ ಗಣೇಶ್ ಭಟ್ ಪನ್ನೆ ಮನೆ, ಸ್ಥಳೀಯ ಪಶು ಚಿಕಿತ್ಸಕರು, ಶ್ರೀ ಸುರೇಶ್ ಪಿ.ಎಸ್. ಕಾರ್ಯದರ್ಶಿ, ಯವರು ಉಪಸ್ಥಿತರಿದ್ದರು.