ಕೂರ್ನಡ್ಕ : ಅಸಕ್ತ ಬಡ ಮಹಿಳೆ ತೇಜಕುಮಾರಿಯವರಿಗೆ ವಾತ್ಸಲ್ಯ ಮನೆ ಹಸ್ತಾಂತರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಸುಳ್ಯ ತಾಲೂಕು ಇದರ ವತಿಯಿಂದ ಬಡ್ಡಡ್ಕದ ಕೂರ್ನಡ್ಕ ಎಂಬಲ್ಲಿಯ ಬಡ ಅಸಕ್ತ ಮಹಿಳೆತೇಜಕುಮಾರಿಯವರಿಗೆ ವಾತ್ಸಲ್ಯ ಮನೆಯನ್ನು ಹಸ್ತಾಂತರಿಸಲಾಯಿತು.
ಸುಳ್ಯ ತಾಲೂಕಿನ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಅಧ್ಯಕ್ಷರಾದ ಲೋಕನಾಥ್ ಅಮಚೂರು ನವರು ನಾಮಫಲಕವನ್ನು ಅನಾವರಣಗೊಳಿಸಿ ಗ್ರಾಮೀಣ ಮಟ್ಟದಲ್ಲಿ ಕೊರತೆಗಳು ಕಂಡುಬಂದಲ್ಲಿ ಮೊದಲಾಗಿ ಆ ಸಮಸ್ಯೆಯನ್ನು ಗುರುತಿಸಿ ಬಗೆಹರಿಸುವುದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಂದು ತಿಳಿಸಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ನಿಕಟಪೂರ್ವ ಅಧ್ಯಕ್ಷರಾದ N A ರಾಮಚಂದ್ರರವರು ವಾತ್ಸಲ್ಯ ಮನೆಯ ಹೂವಿನ ಹಾರವನ್ನು ಬಿಡಿಸುವುದರೊಂದಿಗೆ ಶುಭ ಹಾರೈಸಿ ಜನರ ಸೇವೆ ಮಾಡುವುದಕ್ಕಿಂತ ಪುಣ್ಯದ ಕೆಲಸ ಬೇರೊಂದಿಲ್ಲ ಎಂದು ನುಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕಿನ ಯೋಜನಾಧಿಕಾರಿಗಳಾದ ಮಾದವ ಗೌಡ ಇವರು ಗಣ ಹೋಮದ ಪ್ರಸಾದವನ್ನು ನೀಡುವುದರ ಮೂಲಕ ವಾರಸುದಾರರಿಗೆ ಮನೆಯನ್ನು ಹಸ್ತಾಂತರ ಮಾಡಿದರು.ಈ ಕಾರ್ಯಕ್ರಮವನ್ನು ಉದ್ದೇಶಿಸಿ ವಲಯ ಜನಜಾಗೃತಿ ವೇದಿಕೆ ವಲಯ ಅಧ್ಯಕ್ಷರಾದ ವೆಂಕಪ್ಪ ಗೌಡ್ರು ಮಾತನಾಡುತ್ತಾ ತೇಜ ಕುಮಾರಿ ಅವರಿಗೆ ಆರ್ಥಿಕವಾಗಿ ಹಾಗೂ ಸೂರಿನ ವ್ಯವಸ್ಥೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅದರ ಜೊತೆ ಜೊತೆಗೆ ವೈದ್ಯಕೀಯವಾಗಿ ಸಹಾಯ ಮಾಡಿದ ದೀಪಶ್ರೀ ಆಶ್ರಮದ ಸಮಾಜಸೇವಕರಾದ ಉಮೇಶ್ ನಾಯಕರವರನ್ನು ಪ್ರಶಂಶಿಸಿದರು.
ಅಮರ ಕಲಾ ಹಾಗೂ ಕ್ರೀಡಾ ಸಂಘ ಇದರ ವತಿಯಿಂದ ಸುಮಾರು 8,000 ವೆಚ್ಚದ ನೀರಿನ ಟ್ಯಾಂಕ್ ಹಾಗೂ ನೀರಿನ ವ್ಯವಸ್ಥೆಯ ಉದ್ಘಾಟನೆ ಹಾಗೂ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ದೀಪಶ್ರೀ ಆಶ್ರಮದ ಸಮಾಜಸೇವಕರಾದ, ಉಮೇಶ್ ನಾಯಕ್ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು, ಇವರು ಮಾತನಾಡುತ್ತಾ ತೇಜಕುಮಾರಿಯವರ ಮಾನಸಿಕ ಪರಿಸ್ಥಿತಿ ಹೇಗಿತ್ತು, ಇದಕ್ಕೆ ಸಂಬಂಧಿಸಿದಂತೆ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಸಹಕಾರದೊಂದಿಗೆ ಇವರನ್ನು ವೆನ್ಲಾಕ್ ಆಸ್ಪತ್ರೆಗೆ ವರ್ಗಾವಣೆ ಮಾಡಿ ಸೂಕ್ತ ಚಿಕಿತ್ಸೆಯನ್ನು ಕೊಡಿಸಲಾಯಿತು ಹಾಗೆಯೇ ತೇಜಕುಮಾರಿಯವರು ಮುಂದಕ್ಕೆ ತನ್ನ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ನೋಡಿಕೊಳ್ಳುವಂತೆ ಸಲಹೆಯನ್ನು ನೀಡಿದರು ಹಾಗೆಯೇ ಈ ಸನ್ನಿವೇಶದಲ್ಲಿ ನಾವು ಸೇರಲು ಮೂಲ ಕಾರಣವಾದ ಧರ್ಮಸ್ಥಳ ಯೋಜನೆಯನ್ನು ಸ್ಮರಿಸಿಕೊಂಡು ಇನ್ನು ಮುಂದೆಯೂ ಯೋಜನೆಯ ನಿರರ್ಗಳ ಸೇವೆ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ತಾಲೂಕು ಯೋಜನಾಧಿಕಾರಿಯವರು ಮಾಧವ ಗೌಡ ಅವರು ಮಾತನಾಡುತ್ತಾ ಮಾನಸಿಕ ಖಿನ್ನತೆಗೆ ಒಳಗಾದ ತೇಜಕುಮಾರಿಯವರ ಮನೆ ನಿರ್ಮಾಣಕ್ಕೆ ಸಹಕರಿಸಿದ ಎಲ್ಲಾ ಸಹೃದಯಿಗಳಿಗೂ ಧನ್ಯವಾದಗಳನ್ನು ವ್ಯಕ್ತಪಡಿಸಿದರು. ಹಾಗೂ ರಾಜ್ಯದಲ್ಲಿ ಯೋಜನೆಯಿಂದ ಹಾಗೂ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮ ದಡಿಯಲ್ಲಿ ನಡೆಯುವ ವಾತ್ಸಲ್ಯ ಕಾರ್ಯಕ್ರಮಗಳ ಸವಿವಿವರವಾದ ಮಾಹಿತಿಯನ್ನು ನೀಡಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬಡ್ಡಡ್ಕ ಒಕ್ಕೂಟದ ಅಧ್ಯಕ್ಷರಾದ ವಿಮಲಾಕ್ಷಿ ಅವರು ವಾತ್ಸಲ್ಯಮನೆ ನಿರ್ಮಾಣಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ ನೂತನ ವಾತ್ಸಲ್ಯ ಮನೆಯ ಒಡತಿಗೆ ಶುಭ ಹಾರೈಸಿದರು
ಈ ಕಾರ್ಯಕ್ರಮದಲ್ಲಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷರು ಬೂಡು ರಾಧಕೃಷ್ಣ ರೈ, ಜನಜಾಗೃತಿ ನಿಕಟಪೂರ್ವ ಅಧ್ಯಕ್ಷ ಮಹೇಶ್ ಕುಮಾರ್ ರೈ ಮೇನಾಲ, ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರು ಪದ್ಮನಾಭ ಜೈನ್, ಸುಳ್ಯ ತಾಲೂಕು ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಶ್ರೀಮತಿ ಲಕ್ಷ್ಮಿ, ಅಯ್ಯಪ್ಪ ಭಜನಾ ಮಂದಿರ ಬಡ್ಡಡ್ಕ ಅಧ್ಯಕ್ಷರು ದಿನೇಶ್ ಬಡ್ಡಡ್ಕ, ಸುಳ್ಯ ವಲಯ ಅಧ್ಯಕ್ಷರು ಮನೋಹರ್ ಸುಳ್ಯ, ಬಡ್ಡಡ್ಕ ಒಕ್ಕೂಟ ಸ್ಥಾಪಕ ಅಧ್ಯಕ್ಷರು ಹಾಗೂ ಅಮರ ಕ್ರೀಡಾ ಕಲಾ ಸಂಘದ ಗೌರವ ಅಧ್ಯಕ್ಷರು ದೇವಿ ಪ್ರಸಾದ್ ಬಡ್ಡಡ್ಕ, ಕಲ್ಲಪಲ್ಲಿ ಒಕ್ಕೂಟ ಅಧ್ಯಕ್ಷರಾದ ಶೀಲಾವತಿ ಕಲ್ಲಪಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿಕಟಪೂರ್ವ ಅಧ್ಯಕ್ಷರು ಜಗದೀಶ್ ಕಲ್ಲಪಲ್ಲಿ, ಬಡ್ಡಡ್ಕ ಒಕ್ಕೂಟದ ಉಪಾಧ್ಯಕ್ಷರು ಆಶಾಲತಾ ಆಡಿಂಜ , ಬಡ್ಡಡ್ಕ ಒಕ್ಕೂಟ ಕೋಶಾಧಿಕಾರಿ ಅಶೋಕ ಮೂಲೆಬಡ್ಡಡ್ಕ, ಒಕ್ಕೂಟದ ಜೊತೆ ಕಾರ್ಯದರ್ಶಿ ಪವಿತ್ರ ಅನ್ನಪೂರ್ಣ ಎಲೆಕ್ಟ್ರಿಕಲ್ಸ್ ಮಾಲಕರಾದ ಮಧು ಕಿರಣ್ ಬಡ್ಡಡ್ಕ , ಆಲೆಟ್ಟಿ ಕೋಲ್ಚರ್ ಒಕ್ಕೂಟದ ಅಧ್ಯಕ್ಷರಾದ ವಿಜಯಕುಮಾರ್ ಕೊಲ್ಚಾರು, ಹಾಗೂ ಕಲ್ಲಪಲ್ಲಿ ಬಡ್ಡಡ್ಕ,ಆಲೆಟ್ಟಿ ಕೊಲ್ಚಾರು ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ವಲಯ ಮೇಲ್ವಿಚಾರಕರು ಶ್ರೀಮತಿ ಜಯಶ್ರೀ ಕಾರ್ಯಕ್ರಮದ ಪ್ರಸ್ತಾವಿಕ ಮಾತು ,ಸ್ವಾಗತ ಹಾಗೂ ವಂದನಾರ್ಪಣೆಯನ್ನು ಮಾಡಿದರು.
ಬಡ್ಡಡ್ಕ ಒಕ್ಕೂಟದ ಸೇವಾ ಪ್ರತಿನಿಧಿ ಶ್ರೀಮತಿ ಶಕುಂತಲಾ ವರದಿ ಮಂಡನೆ ಮಾಡಿದರು.
ಶ್ರೀಯುತ ಜಯಪ್ರಕಾಶ್ ಕಲ್ಲಪಲ್ಲಿ ಕಾರ್ಯಕ್ರಮ ನಿರೂಪಿಸಿದರು.

Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top