ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ದೇಶದ ಇನ್ನು ಕೆಲವು ರಾಜ್ಯಗಳಲ್ಲಿ ಮಾ.12ರಿಂದ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದಾದ್ಯಂತ ಬಿಸಿಲಿನ ಧಗೆ ಹೆಚ್ಚಾಗಿದ್ದು, ಎಲ್ಲೆಡೆ ಬಿಸಿಲು ರಾರಾಜಿಸುತ್ತಿದೆ. ಈ ಮಧ್ಯೆ ಬಂಗಾಳಕೊಲ್ಲಿ ಸಮುದ್ರ ಭಾಗದಲ್ಲಿ ಚಂಡಮಾರುತ ಪರಿಚಲನೆ ಸೃಷ್ಟಿಯಾಗಿದೆ. ಹಿಂದೂ ಮಹಾಸಾಗರದಲ್ಲಿ ಉಂಟಾಗಿದ್ದ ವೈಪರಿತ್ಯ ಕೊನೆಗೊಂಡಿದೆ. ಇದೀಗ ತಮಿಳುನಾಡು ಕರಾವಳಿ ಸಮೀಪ ಸಮುದ್ರಮಟ್ಟಕ್ಕಿಂತ 0.9 ಕಿಲೋ ಮೀಟರ್ ಎತ್ತರದಲ್ಲಿ ಚಂಡಮಾರುತದ ಗಾಳಿ ಬೀಸುತ್ತಿದೆ. ಇದು ಪೂರ್ವ ಮುಂಗಾರು ಮಳೆ ಆರಂಭದ ಮುನ್ಸೂಚನೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಂಡಮಾರುತದ ಪರಿಚಲನೆಯು ತಮಿಳುನಾಡಿನ ಒಳಭಾಗ ಮತ್ತು ನೆರೆಹೊರೆಯಲ್ಲಿದೆ. ಇದು ಸರಾಸರಿ ಸಮುದ್ರ ಮಟ್ಟಕ್ಕಿಂತ ಎತ್ತರದಲ್ಲಿದೆ. ಇದು ಮತ್ತಷ್ಟು ತೀವ್ರಗೊಂಡಲ್ಲಿ, ಅದರ ತೀವ್ರತೆಯಿಂದ ಮಳೆ ಆರಂಭವಾಗಲಿದೆ . ಪೂರ್ವ ಮುಂಗಾರು ಮಳೆ ಭಾರೀ ಮಳೆಯೊಂದಿಗೆ ಭಾರತ ಪ್ರವೇಶಿಸಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ಚಂಡಮಾರುತ ಹಿನ್ನಲೆ ನಾಳೆಯಿಂದ ಮಳೆ ಆರಂಭ
