ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಲಘು ಭೂಕಂಪನವಾಗಿರುವುದು ಹೌದೆಂದು ಸಂಬಂಧಪಟ್ಟ ಇಲಾಖೆ ತಿಳಿಸಿದೆ. ಮದೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಹಾಗೂ ಜೋಡುಪಾಲ ಸುತ್ತಮುತ್ತಲ ಪ್ರದೇಶದ,ಮಡಿಕೇರಿ ನಗರದ ಎರಡು ಕಡೆಗಳಲ್ಲಿ ಬುಧವಾರ ಭೂಮಿ ಕಂಪಿಸಿತ್ತು.2ನೇ ಮೊಣ್ಣಂಗೇರಿ, ಬೆಟ್ಟತ್ತೂರು ಸೇರಿದಂತೆ ಸೇರಿದಂತೆ ಕೆಲವು ಭಾಗಗಳಲ್ಲಿ ಬೆಳಿಗ್ಗೆ 10.50 ರ ಸುಮಾರಿನಲ್ಲಿ
ಭೂಮಿ ಕಂಪಿಸಿದೆ. ಮದೆ ಗ್ರಾಮಪಂಚಾಯಿತಿಯಲ್ಲಿ ಭೂಮಿಯಿಂದ 5 ಕಿ.ಮೀ ಆಳದಲ್ಲಿ 1.6 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ತಿಳಿಸಲಾಗಿದೆ.ಇದರ ಕೇಂದ್ರ ಬಿಂದು ಮಡಿಕೇರಿ ನಗರದಿಂದ 4 ಕಿ.ಮೀ, ದೂರದಲ್ಲಿತ್ತು ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.
ಕೊಡಗಿನಲ್ಲಿ ಲಘು ಭೂಕಂಪನ ಸಂಭವಿಸಿರುವುದು ನಿಜ! ಭೂಕಂಪನದ ತೀವ್ರತೆ ಎಷ್ಟಿತ್ತು ? ನೋಡಿ
