ಮಂಡೆಕೋಲು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಹೈನುಗಾರಿಕೆ ಮಾಹಿತಿ ಶಿಬಿರ ಮಾ 10ರಂದು ಸಂಘದ ಧವಳಧಾರೆ ಸಭಾಂಗಣದಲ್ಲಿ ನಡೆಯಿತು. ಮಂಡೆಕೋಲು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು
ಸುಳ್ಯ ರೈತ ಉತ್ಪಾದಕ ಕಂಪನಿಯ ನಿರ್ದೇಶಕಿ ಮಧುರ ಎಂ.ಆರ್. ಉದ್ಘಾಟಿಸಿದರು. ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಮಂಡೆಕೋಲು ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ವೆಂಕಪ್ಪ ನಾಯ್ಕ. ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ದ.ಕ. ಹಾಲು ಒಕ್ಕೂಟ ಮಂಗಳೂರು ಇದರ ಸಹಾಯಕ ವ್ಯವಸ್ಥಾಪಕರಾದ ಡಾ. ಅನುದೀಪ್ ಹಾಗೂ ದ. ಕ. ಹಾಲು ಒಕ್ಕೂಟ ಮಂಗಳೂರು ಇದರ ಸುಳ್ಯ ವಿಸ್ತರಣಾಧಿಕಾರಿ ಹರೀಶ್ ಕುಮಾರ್ ಎಂ.ಎಸ್ ಭಾಗವಹಿಸಿದ್ದರು. ಸಹಕಾರ ಸಂಘದ ಕಾರ್ಯದರ್ಶಿ ಪುಷ್ಪಾವತಿ, ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು, ಸಿಬ್ಬಂದಿಗಳು ಹಾಗೂ ಕೃಷಿಕರು ಭಾಗವಹಿಸಿದ್ದರು.
ಮಂಡೆಕೋಲು : ಹೈನುಗಾರಿಕೆ ಮಾಹಿತಿ ಶಿಬಿರ ಉದ್ಘಾಟನೆ
