ಅರಂಬೂರು : ನಾಳೆಯಿಂದ ದೈವಂಕಟ್ಟು ಮಹೋತ್ಸವ,ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ ದೈವಸ್ಥಾನಗಳು

ಅರಂಬೂರು : ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಮಾ.15ರಿಂದ 18ರ ತನಕ ನಡೆಯಲಿದ್ದು ಸಕಲ ಸಿದ್ಧತೆಗಳಿದ್ದು ಅಂತಿಮ ಹಂತದಲ್ಲಿದೆ.
ಎಲ್ಲರ‌ ಸಹಕಾರದಲ್ಲಿ ಉತ್ಸವ ನಡೆಯಲಿದ್ದು, 4 ದಿನದ ಉತ್ಸವದಲ್ಲಿ ಸುಮಾರು ಎಂಬತ್ತು ಸಾವಿರದಿಂದ ಒಂದು ಲಕ್ಷಕ್ಕೂ ಮಿಕ್ಕಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಪಾರ್ಕಿಂಗ್, ಊಟದ ವ್ಯವಸ್ಥೆ, ಜನರಿಗೆ ಕುಳಿತು ಕೊಳ್ಳುವ ವ್ಯವಸ್ಥೆ ಸೇರಿ ಸಕಲ‌ ವ್ಯವಸ್ಥೆಗಳು ನಡೆಯುತಿದ್ದು, ಭಕ್ತರ ಹಾಗೂ ಊರವರ ಸಹಕಾರದಲ್ಲಿ ಸಿದ್ಧತೆಗಳು ನಡೆಯುತ್ತಿವೆ..ಮಹೋತ್ಸವಕ್ಕೆ ಮಾ.15ರಂದು ಶನಿವಾರ ಪೂ.10 ರಿಂದ ಹಸಿರುವಾಣಿ ಮೆರವಣಿಗೆ ಶ್ರೀ ಮೂಕಾಂಬಿಕ ಭಜನಾ ಮಂದಿರದ ವಠಾರದಿಂದ ಹೊರಡಲಿದೆ.ವಿವಿಧ ಕಡೆಗಳಿಂದ ಆಗಮಿಸಿದ ಹಸಿರುವಾಣಿ ಭಜನಾ ಮಂದಿರದಿಂದ ಮೆರವಣಿಗೆ ಮೂಲಕ ಕ್ಷೇತ್ರಕ್ಕೆ ಆಗಮಿಸಲಿದೆ.
ಪೂ.ಗಂಟೆ 11.15 ರಿಂದ 12.20ರ ಒಳಗೆ ಕಲವರ ನಿರಕ್ಕಲ್ (ಉಗ್ರಾಣ ತುಂಬುವುದು).ರಾತ್ರಿ 7.00 ರಿಂದ ಶ್ರೀ ವಿಷ್ಣುಮೂರ್ತಿ ಸಪರಿವಾರ ದೈವಗಳಿಗೆ ಕೂಡುವುದು.ರಾತ್ರಿ 10 ರಿಂದ ಶ್ರೀ ಕೊರ್ತಿಯಮ್ಮನ ಕೋಲಗಳು ರಾತ್ರಿ 1.30 ರಿಂದ ಶ್ರೀ ಪೊಟ್ಟನ್ ದೈವ ನಡೆಯಲಿದೆ.ಮಾ.16ರಂದು ಆದಿತ್ಯವಾರ ಪೂ.9ರಿಂದ ಶ್ರೀ ವಿಷ್ಣುಮೂರ್ತಿ ದೈವ ಪೂ.10:30 ರಿಂದ ಶ್ರೀ ಚಾಮುಂಡಿಯಮ್ಮ ಮಧ್ಯಾಹ್ನ ಗಂಟೆ 12.30ರಿಂದ ಶ್ರೀ ಗುಳಿಗ ದೈವ,ಸಂಜೆ 6ರಿಂದ
ಕೈವೀದ್ ನಂತರ ಶ್ರೀ ವಯನಾಟ್ ಕುಲವನ್ ಹಾಗೂ ಸಪರಿವಾರ ದೈವಗಳಿಗೆ ಕೂಡುವುದು.ಮಾ.17ರಂದು ಸೋಮವಾರ ಅಪರಾಹ್ನ 2 ರಿಂದ ಶ್ರೀ ಕಾರ್ನವನ್‌ ದೈವದ ವೆಳ್ಳಾಟಂ ಅಪರಾಹ್ನ 4 ರಿಂದ ಶ್ರೀಕೋರಚ್ಚನ್‌ ದೈವದ ವೆಳ್ಳಾಟಂ, ಸಂಜೆ 7 ರಿಂದ ಶ್ರೀಕಂಡನಾರ್‌ ಕೇಳನ್ ದೈವದ ವೆಳ್ಳಾಟಂ,ರಾತ್ರಿ 11ರಿಂದ ನಂತರ ಬಪ್ಪಿಡಲ್, ಶ್ರೀ ವಿಷ್ಣುಮೂರ್ತಿದೈವಕ್ಕೆ ಕೂಡುವುದು. ರಾತ್ರಿ 12 ರಿಂದ ಶ್ರೀವಯನಾಟ್ ಕುಲವನ್ ದೈವದ ವೆಳ್ಳಾಟಂ.
ಮಾ.18 ಮಂಗಳವಾರ ಪೂರ್ವಾಹ್ನ 9ರಿಂದ ಶ್ರೀ ಕಾರ್ನವನ್ ದೈವ 11ರಿಂದ ಶ್ರೀ ಕೋರಚ್ಚನ್ ದೈವ, ಮಧ್ಯಾಹ್ನ 1.00 ರಿಂದ ಶ್ರೀ ಕಂಡನಾರ್ ಕೇಳನ್ ದೈವ ಸಂಜೆ ಗಂಟೆ 4ರಿಂದ ಶ್ರೀ ವಯನಾಟ್ ಕುಲವನ್ ದೈವ ಸೂಟೆ ಸಮರ್ಪಣೆ. ಸಂಜೆ 5 ರಿಂದ ಶ್ರೀ ವಿಷ್ಣುಮೂರ್ತಿ ದೈವ ರಾತ್ರಿ1ರಿಂದ ಮರ ಪಿಳರ್ಕಲ್ ನಂತರ ಕೈವೀದ್ ನಡೆಯಲಿದೆ
ಮಹೋತ್ಸವದ ಪ್ರಯುಕ್ತ ದೈವಸ್ಥಾನದಲ್ಲಿ ಕೆಲವು ಶಾಶ್ವತ ಯೋಜನೆಗಳನ್ನು ಮಾಡಲಾಗಿದೆ‌. ಅಡುಗೆ ಕೋಣೆ ನಿರ್ಮಾಣ, ಬಾವಿಯ ನವೀಕರಣ, ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ಟ್ಯಾಂಕ್ ಅಳವಡಿಕೆ ಮತ್ತಿತರ ಕೆಲಸಗಳನ್ನು ಮಾಡಲಾಗಿದೆ. ದೈವಂಕಟ್ಟು ಉತ್ಸವಕ್ಕೆ ಮರಕ್ಕಳ, ಉಗ್ರಾಣ ವ್ಯವಸ್ಥೆ, ಕಾರ್ಯಾಲಯ, ಭಕ್ತರಿಗೆ ಕುಳಿತುಕೊಳ್ಳುವ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಅಲಂಕಾರ ಕೆಲಸಗಳು ನಡೆಯುತಿವೆ, ಪ್ರತಿ ದಿನ ಸುಮಾರು 150-200 ಮಂದಿ ಶ್ರಮದಾನದ ಮೂಲಕ ಕೆಲಸ ಕಾರ್ಯಗಳನ್ನು ನಡೆಸಲಾಗುತ್ತಿದೆ.

Ad Widget . Ad Widget
Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top