ಬೆಳ್ಳಾರೆಯ ನೆಟ್ಟಾರಿನಲ್ಲಿರುವ ಅರ್ನಾಡಿ ರೈಸ್ ಮಿಲ್ ನ ಮಾಲಕರಾದ ಸದಾನಂದ ಭಟ್( 72 ವರ್ಷ)ಅರ್ನಾಡಿ ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಮಾ. 17ರಂದು ನಿಧನರಾದರು.
1983 ರಲ್ಲಿ ರೈಸ್ ಮಿಲ್ಲನ್ನು ಸ್ಥಾಪಿಸುವ ಮೂಲಕ ಭತ್ತ ಬೆಳೆಯುವ ರೈತರಿಗೆ ಪಾಲಿಗೆ ವರದಾನವಾದರು. ಭತ್ತದೊಂದಿಗೆ, ತೆಂಗಿನ ಎಣ್ಣೆ, ಸಾಂಬಾರ ಪದಾರ್ಥಗಳನ್ನು ಕನಿಷ್ಠ ದರದಲ್ಲಿ ಪುಡಿ ಮಾಡಿ ಕೊಡುವುದು ಇತ್ಯಾದಿ ಮಾಡುತ್ತಿದ್ದರು. ಇತ್ತೀಚಿಗೆ ಮಿಲ್ಲನ್ನು ನಡೆಸಲು ಲೀಸ್ ನಲ್ಲಿ ಮನೋಹರ ಗಾಣಿಗರಿಗೆ ನೀಡಿ ತಮ್ಮ ಪುತ್ರ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಶಶಾಂಕರೊಂದಿಗೆ ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ಕಳೆದ ಶನಿವಾರ ಅಸೌಖ್ಯಕ್ಕೆ ಒಳಗಾದ ಇವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ಬೆಳ್ಳಾರೆಯ ಖ್ಯಾತ ಉದ್ಯಮಿ ನಿಧನ
