ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನಾಲ್ಕು ದಿನಗಳ ಕಾಲ ನಡೆದ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವವು ಮಾ.19 ರ ಮುಂಜಾನೆ ಸಂಪನ್ನಗೊಂಡಿತು.
ಮಾ.15 ರಿಂದ ಪ್ರಾರಂಭಗೊಂಡ ಉತ್ಸವದಲ್ಲಿ ತುಳು ದೈವಗಳ ಕೋಲವು ನಡೆದು .17
ರಿಂದ ಕಾರ್ನವನ್ ದೈವ,ಕೋರಚ್ಚನ್ ದೈವ,ಕಂಡನಾರ್ ಕೇಳನ್ ದೈವ, ವಯನಾಟ್ ಕುಲವನ್ ದೈವದ ವೆಳ್ಳಾಟಂ ರಾತ್ರಿ ವೇಳೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ದೈವಗಳ ವೆಳ್ಳಾಟಂ ವೀಕ್ಷಿಸಲು ರಾಜ್ಯ ಹೊರ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು. ಮರುದಿನ ಬೆಳಗ್ಗೆ ಶ್ರೀ ದೈವಗಳ ನರ್ತನ ಸೇವೆಯಾಗಿ ಸಂಜೆ ಶ್ರೀ ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶವಾಯಿತು. ಅಂಗಣ ಪ್ರವೇಶಿಸಿದ ವಯನಾಟ್ ಕುಲವನ್ ದೈವಕ್ಕೆ ಸೂಟೆ ಸಮರ್ಪಣೆ ಮಾಡಲಾಯಿತು.
ಬಳಿಕ ವಿಷ್ಣುಮೂರ್ತಿ ದೈವ ಮರಕಳಕ್ಕೆ ಪ್ರವೇಶ ಮಾಡಿತು.ಈ ಸಂದರ್ಭದಲ್ಲಿ ಕಂಡನಾರ್ ಕೇಳನ್ ದೈವ,ಕೊರಚ್ಷನ್ ದೈವ,ಕಾರ್ನವನ್ ದೈವಗಳ ಕೋಲಗಳು ನಡೆದವು.
ನಿರಂತರ ನಾಲ್ಕು ದಿವಸ ಅನ್ನದಾನ ನಡೆದವು.
ಅರಂಬೂರು : ದೈವಂಕಟ್ಟು ಮಹೋತ್ಸವ ಸಂಪನ್ನ
