ಅಡ್ತಲೆ ಅರಂತೋಡು ರಸ್ತೆಯಲ್ಲಿ ಲಾರಿಯೊಂದು ರಸ್ತೆ ಸಾಮರ್ಥ್ಯಕ್ಕಿಂತ ಅಧಿಕ ಭಾರದ
ರಬ್ಬರ್ ಮರ ಸಾಗಾಟ ಮಾಡುತ್ತಿದೆ.ಇದರಿಂದ ರಸ್ತೆಗೆ ಅಪಾಯ ಎದುರಾಗಲಿದೆ ಎಂದು ಲಾರಿ ಚಾಲಕನಿಗೆ ತಿಳಿಸಿ ರಬ್ಬರ್ ಮರ ಸಾಗಾಟದ ಲಾರಿಯನ್ನು ಅಡ್ತಲೆ ನಾಗರೀಕ ಹಿತರಕ್ಷಣಾ ಸಮಿತಿಯವರು ಅಡ್ತಲೆ ಶಾಲಾ ಬಳಿ ತಡೆದು ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ಶುಕ್ರವಾರ ವರದಿಯಾಗಿದೆ.
ಮರ್ಕಂಜದಿಂದ ಬಂಟ್ವಾಳಕ್ಕೆ ರಬ್ಬರ್ ಮರ ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ನಾಗರೀಕ ಹಿತರಕ್ಷಣಾ ಸಮಿತಿಯವರು ಬುಧವಾರ ಮರ್ಕಂಜ ಕಲ್ಲು ಕೊರೆಯಯಿಂದ ಲಾರಿಯಲ್ಲಿ ಅಧಿಕ ಭಾರದ ಜಲ್ಲಿ ಸಾಗಾಟ ಮಾಡುತ್ತಿದ್ದಾರೆ ಎಂದು ಸಂಶಯಿಸಿ ಲಾರಿಯನ್ನು ತಡೆದು ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಲ್ಲು ಕೋರೆಯ ಮಾಲೀಕರಿಗೆ ಅಧಿಕ ಬಾರದ ವಾಹನ ಚಾಲನೆಗೆ ಅವಕಾಶ ಮಾಡಿ ಕೊಡಬಾರದು ರಸ್ತೆ ಹುಳ ಗುತ್ತಿ ಎಂದು ಪಂಚಾಯತ್ ಮೂಲಕ ತಿಳಿಸಿದ್ದರೂ ಮತ್ತೆ ಮತ್ತೆ ಕದ್ದು ಮುಚ್ಚಿ ಅಧಿಕ ಭಾರದ ಲಾರಿಗಳು ಓಡಾಡುತ್ತಿವೆ ಎಂದು ನಾಗರೀಕ ಹಿತರಕ್ಷಣಾ ವೇದಿಕೆ ಅಡ್ತಲೆ ಹಾಗೂ ಊರಿನವರು ಮಾದ್ಯಮದವರೊಂದಿಗೆ ದೂರಿಕೊಂಡಿದ್ದಾರೆ.ಇತ್ತೀಚೆಗಷ್ಟೆ ಸ್ಥಳೀಯರು ನಾಗರೀಕ ಹಿತರಕ್ಷಣಾ ಸಮಿತಿ ರಚಿಸಿಕೊಂಡು ಹೋರಾಟ ಮಾಡಿ ರಸ್ತೆ ಅಭಿವೃದ್ಧಿಗೆ ಭಾರೀ ಪ್ರಯತ್ನ ಮಾಡಿದ್ದಾರೆ.
ಅಡ್ತಲೆ :ಲಾರಿಯಲ್ಲಿ ಅಧಿಕ ತೂಕದ ರಬ್ಬರ್ ಮರ ಸಾಗಾಟ,ಲಾರಿಯನ್ನು ತಡೆದು ನಿಲ್ಲಿಸಿದ ಅಡ್ತಲೆ ನಾಗರೀಕ ಹಿತರಕ್ಷಣಾ ವೇದಿಕೆ
