ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡೋಳುಕೆರೆ ಎಂಬಲ್ಲಿ ದಟ್ಟ ಕಾಡಿನ ಮಧ್ಯೆ ನಾಲ್ಕು ತಿಂಗಳ ಹೆಣ್ಣು ಮಗುವೊಂದು ಪತ್ತೆಯಾದ ಘಟನೆ ವರದಿಯಾಗಿದೆ.
ಪ್ರಕರಣ ಶನಿವಾರ ಬೆಳಗ್ಗೆ ತಿಳಿದು ಬಂದಿದೆ.
ಮಗುವಿನ ಅಳುವ ಶಬ್ದ ಕೇಳಿ ಸ್ಥಳೀಯರು ಆತಂಕಗೊಂಡು ಕಾಡಿಗೆ ಹೋದಾಗ ಅಲ್ಲಿ ಒಂಟಿಯಾಗಿ ಅಳುತ್ತಿದ್ದ ಆ ಮಗುವನ್ನು ಕಂಡು ಆಶ್ಚರ್ಯಚಕಿತರಾದರು. ಮುಂಡೊಟ್ಟು ರಸ್ತೆಯ ಬಳಿಯ ಕೊಡೋಳುಕೆರೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸುತ್ತಮುತ್ತಲಿನ ನಿವಾಸಿಗಳಿಗೆ ಮತ್ತು ಆ ದಾರಿಯಲ್ಲಿ ಹಾದುಹೋಗುತ್ತಿದ್ದ ಒಬ್ಬ ಮಹಿಳೆಗೆ ಮಗುವಿನ ಧ್ವನಿ ಕೇಳಿಸಿತು. ತಕ್ಷಣವೇ ಅವರು ಬೆಳಾಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿದ್ಯಾ ಅವರಿಗೆ ಈ ವಿಷಯವನ್ನು ತಿಳಿಸಿದರು.ಬಳಿಕ ಸಂಬಂಧಪಟ್ಟ ಅಧಿಕಾರಿಗಳು ಆಗಮಿಸಿ ಮಗುವಿನ ಆರೋಗ್ಯ ಕಾಪಾಡುವ ಕ್ರಮ ಕೈಗೊಂಡಿದ್ದಾರೆ.
ಕಾಡಿನಲ್ಲಿ ಅನಾಥ ಮಗು ಪತ್ತೆ
