ಗೂನಡ್ಕ: ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕ ರಾಜರಾಮಪುರ ಎಂಬಲ್ಲಿ ಮಹಿಳೆಯೊಬ್ಬರು ಹುಚ್ಚು ನಾಯಿ ಕಡಿತಕೊಳಗಾಗಿ ನಿಧನ ಹೊಂದಿದ ಘಟನೆ ವರದಿಯಾಗಿದೆ.
ಹುಚ್ಚು ನಾಯಿ ಕಡಿತಕೊಳಗಾಗಿ ಮ್ರತಪಟ್ಟ ಮಹಿಳೆಯನ್ನು ಬೇಬಿ(42)ಎಂದು ಗುರುತಿಸಲಾಗಿದೆ.
ಅವರು ಒಂದು ತಿಂಗಳ ಹಿಂದೆ ಅರಂತೋಡು ಭಾಗಕ್ಕೆ ಕೂಲಿ ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ನಾಯಿಯ ಮರಿಯೊಂದು ಕಚ್ಚಿತ್ತು.ಆದರೆ ಈ ವಿಷಯವನ್ನು ಅವರು ಮನೆಯವರಿಗೆ ಹೇಳಿರಲಿಲ್ಲ.ಅಲ್ಲದೆ ಚುಚ್ಚುಮದ್ದು ತೆಗೆದುಕೊಂಡಿರಲಿಲ್ಲ.ಕಳೆದ ಸೋಮವಾರ ರೋಗ ಉಲ್ಬನಗೊಂಡು ನೀರು ನೋಡುತ್ತಿದ್ದಾಗವ ಹೆದರುತ್ತಿದ್ದ ಅವರನ್ನು ಮನೆಯವರು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.ಬಳಿಕ ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ರು.ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮ್ರತಪಟ್ಟರು.
ಮ್ರತರು ಪತಿ ಪತ್ನಿ,ಒಂದು ಹೆಣ್ಣು ಎರಡು ಗಂಡು ಮಕ್ಕಳನ್ನು ಅಗಲಿದ್ದಾರೆ.
ಹುಚ್ಚು ನಾಯಿ ಕಡಿದು ಮಹಿಳೆ ಸಾವು
