ಕೆ ಪಿ. ಎಸ್. ಗಾಂಧಿನಗರ ಸುಳ್ಯ ಇಲ್ಲಿ ಲಯನ್ಸ್ ಕ್ಲಬ್ ಇದರ ಸಹಕಾರ ದಲ್ಲಿ ನಿರ್ಮಿಸಲಾದ ಶಾಲಾ ಅಕ್ಷರ ಕೈತೋಟ ವನ್ನು ಜಿಲ್ಲಾ ಲಯನ್ಸ್ ಗವರ್ನರ್ ಭಾರತಿ ಉದ್ಘಾಟಿಸಿದರು. ಲಯನ್ಸ್ ಸುಳ್ಯ ಇದರ ಅಧ್ಯಕ್ಷ ರಾದ ರಾಮಕೃಷ್ಣ ರೈ ಎಲ್ಲರನ್ನು ಸ್ವಾಗತಿಸಿದರು, ಶಿಕ್ಷಕರಾದ ಚಿನ್ನಪ್ಪಗೌಡ ಪತ್ತುಕುಂಜ, ಕೈತೋಟ ನಿರ್ಮಾಣ ಮಾಡಿದ್ದು, ಮಕ್ಕಳಿಗೆ ಸಾವಯವ ತರಕಾರಿ ಬೆಳೆದಿದ್ದು, ಬಿಸಿಯೂಟಕ್ಕೆ ಬಳಕೆ ಮಾಡಲಾಗುತ್ತಿದೆ. ಮುಖ್ಯ ಶಿಕ್ಷಕರಾದ ಜ್ಯೋತಿ ಲಕ್ಷ್ಮೀ, ಎಲ್ಲರನ್ನು ವಂದಿಸಿದರು.
ಗಾಂಧಿನಗರ : ಕೆಪಿಎಸ್ ನಲ್ಲಿ ಅಕ್ಷರ ಕೈತೋಟ ಉದ್ಘಾಟನೆ
