ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಇರಂತಮಜಲು ಎಂಬಲ್ಲಿ ಸ್ಕೂಟಿಗೆ ರಿಕ್ಷಾ ಢಿಕ್ಕಿಯಾದ ಪರಿಣಾಮ ಸವಾರರಿಬ್ಬರೂ ಗಾಯಗೊಂಡಿರುವ ಘಟನೆ ಸೋಮವಾರ ವರದಿಯಾಗಿದೆ.
ಅಜ್ಜಾವರದ ತುದಿಯಡ್ಕದಲ್ಲಿ ಕಾರ್ಯಕ್ರಮ ಮುಗಿಸಿ, ಕಾಸರಗೋಡಿನ ಮಲ್ಲಕ್ಕೆ ಸ್ಕೂಟಿಯಲ್ಲಿ ಹೋಗುತ್ತಿದ್ದ ಜನಾರ್ದನಾ ಇಂದಿರಾ ದಂಪತಿಗಳ ಸ್ಕೂಟಿಗೆ, ಸುಳ್ಯದ ಕಡೆ ಬರುತ್ತಿದ್ದ ಪೇರಾಲಿನ ಹರಿಪ್ರಸಾದ್ ಎಂಬವರ ರಿಕ್ಷಾ ಢಿಕ್ಕಿಯಾಯಿತು.
ಈ ಅಪಘಾತದಿಂದ ರಿಕ್ಷಾ ಪಲ್ಟಿಯಾದರೆ, ಸ್ಕೂಟಿಯಲ್ಲಿದ್ದ ದಂಪತಿಗಳು ರಸ್ತೆಯ ಬದಿಗೆ ಎಸೆಯಲ್ಪಟ್ಟು ಗಾಯಗೊಂಡರು.ರಿಕ್ಷಾ ಸ್ಕೂಟಿ ಜಖಂಗೊಂಡಿದೆ.
ಅಜ್ಜಾವರ : ರಿಕ್ಷಾ ಸ್ಕೂಟಿ ಅಪಘಾತ
