ಸುಳ್ಯ ತಾಲೂಕಿನಲ್ಲಿ ಮಂಗಳವಾರ ಸಂಜೆ ಭಾರೀ ಗಾಳಿ ಮಳೆ ಸುರಿದಿದ್ದು ಹಾನಿ ಸಂಭವಿಸಿದ ಘಟನೆ ವರದಿಯಾಗುತ್ತಿದೆ.
ಅರಂತೋಡಿನಲ್ಲಿ ಸಂಜೆ ಬಿಸಿದ ಗಾಳಿ ಮಳೆ ಗೆ ಅರಂತೋಡು ಶಾಲಾ ಬಳಿ ತೆಂಗಿನ ಮರ ಮುರಿದು ಬಿದ್ದು ಅರಂತೋಡು ಅಂಗಡಿ ಮಜಲು ರಸ್ತೆ ತಡೆ ಉಂಟಾಗಿ ಸಂಚಾರಕ್ಕೆ ಬಂದ್ ಆಗಿತ್ತು .ಇದನ್ನು ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆಶಿಕ್ ಅರಂತೋಡು, ಕೃಷ್ಣ ದಾಸರ ಹಿತ್ಲು,ಹಮೀದ್ ಕುಕ್ಕಂಬಳ,ಮುನೀರ್ ಸಂಟ್ಯಾರ್,ತಾಜುದ್ದೀನ್ ಅರಂತೋಡು ತೆರವು ಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.ಇನ್ನು ಕೆಲವು ಕಡೆ ಗಾಳಿಗೆ ಶಿಟ್ ಹಾರಿ ಬಿದ್ದಿವೆ.ರಬ್ಬರ್ ಮರಗಳು ಅಡಿಕೆ ತೋಟಗಳು ಉರುಳಿ ಬಿದ್ದಿವೆ.ತೊಡಿಕಾನ ಗ್ರಾಮದಲ್ಲಿ ಆಲಿಕಲ್ಲು ಭಾರೀ ಗಾಳಿ ಮಳೆ ಸುರಿದಿದ್ದು ದೊಡ್ಡಡ್ಕ ಸಮೀಪ ಎರಡು ಮರಗಳು ವಿದ್ಯುತ್ ಲೈನ್ ಮೇಲೆ ಬಿದ್ದು ವಿದ್ಯುತ್ ಕಂಬಗಳು ಕಟ್ ಆಗಿದೆ. ತೊಡಿಕಾನ ಗ್ರಾಮದ ತಿಮ್ಮಯ್ಯ ಮೆತ್ತಡ್ಕ ಅವರಿಗೆ ಸೇರಿದ 5೦ಕ್ಕೂ ಅಧಿಕ ಅಡಿಕೆ ಮರಗಳು,ಬಾಳೆಮರಗಳು ಉರುಳಿ ಬಿದ್ದಿವೆ.ಪೆರಾಜೆ ಗ್ರಾಮದ ಕೊಳಂಗಾಯ ರಸ್ತೆಗೆ ತೆಂಗಿನ ಮರ ಉರುಳಿ ಬಿದ್ದು ರಸ್ತೆ ತಡೆ ಉಂಟಾಯಿತು.ಅಲ್ಲದೆ ಗ್ರಾಮದ ಕ್ರಷಿ ತೋಟಮನೆಗಳಿಗೆ ಹಾನಿಯಾಗಿವೆ.
ಸುಳ್ಯ ತಾಲೂಕಿನಲ್ಲಿ ಭಾರೀ ಗಾಳಿ ಮಳೆಗೆ ವ್ಯಾಪಕಹಾನಿ
