ಅರಂತೋಡು : ಅರಂತೋಡು ಗ್ರಾಮ ಪಂಚಾಯತ್ ಸದಸ್ಯೆ ಸುಜಯ ಲೋಹಿತ್ ಅವರ ತೊಟಕ್ಕೆ ಕಾಡಾನೆ ದಾಳಿ ಅಪಾರ ಕೃಷಿ ನಾಶ ಮಾಡಿದ ಘಟನೆ ಮಂಗಳವಾರ ರಾತ್ರಿ ವರದಿಯಾಗಿದೆ.ತೆಂಗಿನ ಮರ ಬಾಳೆ ಇತರ ಕ್ರಷಿ ಬೆಳೆಗಳನ್ನು ನಾಶ ಮಾಡಿದೆ.
ಅನೇಕ ತಿಂಗಳಿನಿಂದ ಅಡ್ತಲೆ ಪರಿಸರ ದಲ್ಲಿ ಕಾಡಾನೆಗಳು ಬೀಡು ಬಿಟ್ಟು ಆಗಾಗ್ಗೆ ಕೃಷಿ ನಾಶ ಮಾಡುತ್ತಿದೆ. ಕಾಡು ಕೋಣ ಹಾವಳಿಯು ಹೆಚ್ಚಾಗಿದ್ದು ಅನೇಕ ರೈತರ ಕ್ರಷಿ ಮಾಶ ಮಾಡಿವೆ.
ಆನೆ ಹಾಗೂ ಕಾಡು ಕೋಣಗಳ ಹಾವಳಿ ವಿಪರೀತ ಆಗುತ್ತಿದ್ದು, ಜನಪ್ರತಿನಿದಿನಗಳು ದಯವಿಟ್ಟು ಸಂಬಂಧ ಪಟ್ಟ ಅರಣ್ಯ ಇಲಾಖೆಗೆ ಒತ್ತಡ ನೀಡಿ. ಕಾಡಾನೆಗಳನ್ನು ಕಾಡಿನೊಳಗೆ ಓಡಿಸುವ ಕೆಲಸ ಆಗಬೇಕು.ಹಾಗೆಯೇ ಆನೆ ಕಂದಕವನ್ನು ಪುನರ್ ನಿರ್ಮಾಣ ಮಾಡಿದಲ್ಲಿ, ಕೃಷಿ ನಾಶ ಹಾಗೂ ಮಾನವ ಹಾಗೂ ಕಾಡು ಪ್ರಾಣಿ ಸಂಘರ್ಷ ತಡೆಗಟ್ಟಬಹುದು ಸ್ಥಳೀಯರು ಒತ್ತಾಯಿಸಿದ್ದಾರೆ.
ಅರಂತೋಡು : ಗ್ರಾಮ ಪಂಚಾಯತ್ ಸದಸ್ಯೆಯ ತೋಟಕ್ಕೆ ಕಾಡಾನೆ ದಾಳಿ ಮಾಡಿ ಕ್ರಷಿ ನಾಶ
