ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬೆಳ್ಳಾರೆ ವಲಯದ ಕಳಂಜ ಕಾರ್ಯಕ್ಷೇತ್ರದಲ್ಲಿ ಶ್ರೀ ವಿಷ್ಣಮೂರ್ತಿ ದೈವಸ್ಥಾನದ ನೂತನ ಭೋಜನಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 3 ಲಕ್ಷ ಅನುದಾನದ ಮಂಜೂರಾತಿ ಪತ್ರ ವಿತರಣೆ ಇಂದು ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ ) ಸುಳ್ಯ ಇದರ ಯೋಜನಾಧಿಕಾರಿಗಳಾದ ಶ್ರೀ ಮಾಧವ,ಗೌಡ ಇವರು ಶ್ರೀ ವಿಷ್ಣುಮೂರ್ತಿ ಸೇವಾ ಟ್ರಸ್ಟ್ (ರಿ ) ಕಳಂಜ ಇದರ ಅಧ್ಯಕ್ಷರಾದ ಶ್ರೀ ಕರುಣಾಕರ ಶೆಟ್ಟಿ, ಅವರಿಗೆ ಮಂಜೂರಾತಿ ಪತ್ರ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಖಜಾಂಜಿ ಶ್ರೀ ರಾಜೇಶ್ ಪಟ್ಟೆ,ತಾಲೂಕು ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಎನ್ ವಿಶ್ವನಾಥ ರೈ, ಬೆಳ್ಳಾರೆ ವಲಯದ ಅಧ್ಯಕ್ಷರಾದ ಶ್ರೀಮತಿ ವೇದಾ ಶೆಟ್ಟಿ,SKDRDP ವಲಯ ಮೇಲ್ವಿಚಾರಕಿ ಶ್ರೀಮತಿ ವಿಶಾಲ, SKDRDP ಸೇವಾ ಪ್ರತಿನಿಧಿ ಶ್ರೀಮತಿ ಅಶ್ವಿನಿ, SKDRDP VLE ಶ್ರೀಮತಿ ಶ್ವೇತಾ ವಿಜಯ್, ಅಮರಪಡ್ನೂರು ಕಾರ್ಯಕ್ಷೇತ್ರದ ಶ್ರಿಮತಿ ದಿವ್ಯ, ಸುವಿದ ಸಹಾಯಕಿ ಶ್ರಿಮತಿ ನೇತ್ರವತಿ ಕಳಂಜ ಒಕ್ಕೂಟದ ಪಧಾಧಿಕಾರಿ ಅದ ಮಾಯಿಲಪ್ಪ ಹಾಗೂ ದೈವಸ್ಥಾನ ದ ಟ್ರಸ್ಟ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಕಳಂಜ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಭೋಜನ ಶಾಲೆ ಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 3 ಲಕ್ಷ ಧನಸಹಾಯ
