ಅರಂತೋಡು ಪ್ರತಿಷ್ಠಾನ ವತಿಯಿಂದ ಮಾ. 26 ರಂದು ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆದ ಇಪ್ಪತ್ತನೇ ವರ್ಷದ ಸರ್ವಧರ್ಮ ಸೌಹಾರ್ದ ಇಫ್ತಾರ್ ಕೂಟವು ಭಾವೈಕ್ಯದ ಸಂಗಮವಾಯಿತು. ಕಾರ್ಯಕ್ರಮದಲ್ಲಿ ಮೂರು ಧರ್ಮದ ಧರ್ಮ ಗುರುಗಳನ್ನು ತೆಕ್ಕಿಲ್ ಪ್ರತಿಷ್ಠಾನ ವತಿಯಿಂದ ಸನ್ಮಾನಿಸಲಾಯಿತು. ಅನ್ನಪೂರ್ಣೇಶ್ವರಿ ಕ್ಷೇತ್ರ ಯೋಗೇಶ್ವರ ಸಿದ್ದ ಪುರುಷ ಮಠ ಮರ್ಕಂಜ ಇದರ ಧರ್ಮದರ್ಶಿ ರಾಜೇಶ್ ನಾಥ್ ಜಿ. ಸುಳ್ಯ ಬೀರಮಂಗಲ ಸೈಂಟ್ ವಿಕ್ಟರ್ ಚರ್ಚ್ ನ ಧರ್ಮ ಗುರು ಫಾದರ್ ವಿಕ್ಟರ್ ಡಿ’ಸೋಜಾ , ಅರಂತೋಡು ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಇಸ್ಮಾಯಿಲ್ ಫೈಝಿ ಗಟ್ಟಮನೆ ಇವರನ್ನು ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಾಹಿದ್ ತೆಕ್ಕಿಲ್ ಶಾಲು ಹೊದಿಸಿ ಸನ್ಮಾನಿಸಿದರು. ಇಫ್ತಾರ್ ಬಿಡುವ ಸಂಧರ್ಭದಲ್ಲಿ ಧರ್ಮಧರ್ಶಿ ರಾಜೇಶ್ ನಾಥ್ ಜಿ ಖರ್ಜುರವನ್ನು ಫಾದರ್ ವಿಕ್ಟರ್ ಡಿ’ ಸೋಜ ಹಣ್ಣು ಹಂಪಲುಗಳನ್ನು ಟಿ.ಎಂ ಶಾಹಿದ್ ತೆಕ್ಕಿಲ್ ಅವರ ಬಾಯಿಗೆ ಹಾಕಿ ಇಫ್ತಾರ್ ನ್ನು ಪ್ರಾರಂಭಿಸಿ ಭಾವೈಕ್ಯತೆಯ ಸಂದೇಶವನ್ನು ಸಾರಿದರು. ಸ್ವಾಮೀಜಿ ಫಾದರ್ ಮುಸ್ಲಿಂ ಧರ್ಮದವರು ಕಜೂರವನ್ನು ಪರಸ್ಪರ ಬಾಯಿಗೆ ನೀಡಿ ಒಂದೇ ತಾಯಿಯ ಮಕ್ಕಳಂತೆ ಇಫ್ತಾರ್ ಕೂಟದಲ್ಲಿ ಭಾಗಿಯಾದರೂ ಅದಕ್ಕೆ ಗಣ್ಯರು ಅಧಿಕಾರಿಗಳು ಸಭಿಕರು ಸಾಕ್ಷಿಯಾದರು
ಅರೆಭಾಷೆ ಅಕಾಡೆಮಿ ಅಧ್ಯಕ್ಪ ಸದಾನಂದ ಮಾವಜಿ, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸುಳ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ, ವಲಯಾರಣ್ಯಾಧಿಕಾರಿ ಮಂಜುನಾಥ್, ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ್, ಸುಳ್ಯ ನಗರ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ ಮುಸ್ತಫ, ಮುಖಂಡರಾದ ರಾಧಾಕೃಷ್ಣ ಬೊಳ್ಳೂರು, ಪಿ.ಎಸ ಗಂಗಾಧರ್, ಗೋಕುಲ್ ದಾಸ್, ಮಹಮ್ಮದ್ ಇಕ್ಬಾಲ್ ಎಲಿಮಲೆ,ಶಂಸುದ್ದಿನ್,ಟಿ ಎಂ ಶಮೀರ್ ತೆಕ್ಕಿಲ್, ಭವಾನಿಶಂಕರ ಕಲ್ಮಡ್ಕ, ಚೇತನ್ ಕಜೆಗದ್ದೆ, ಟಿ ಎಂ ಜಾವೆದ್ ತೆಕ್ಕಿಲ್, ಮೊದಲಾದವರು ಉಪಸ್ಥಿತರಿದ್ದರು. ಪ್ರತಿಷ್ಟಾನ ಕಾರ್ಯದರ್ಶಿ ಅಶ್ರಫ್ ಗುಂಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಭಾವೈಕ್ಯತೆಯ ಸಂಗಮವಾದ ತೆಕ್ಕಿಲ್ ಇಫ್ತಾರ್ ಕೂಟ,ಮೂರು ಧರ್ಮದ ಧರ್ಮಗುರುಗಳಿಗೆ ಪ್ರತಿಷ್ಠಾನ ವತಿಯಿಂದ ಸನ್ಮಾನ
