ಪುತ್ತೂರು; ಮಹಿಳೆ ಹಾಗೂ ಆಕೆಯ ಸಹೋದರನಿಗೆ ತಲ್ವಾರಿನಿಂದ ವ್ಯಕ್ತಿಯೊಬ್ಬರು ಹಲ್ಲೆಗೆ ಯತ್ನಿಸಿರುವ ಘಟನೆ ಘಟನೆ ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಸಂಪ್ಯದ ಮೂಲೆ ಎಂಬಲ್ಲಿ ನಡೆದಿದೆ.
ಸಂಪ್ಯದ ಮೂಲೆ ನಿವಾಸಿ ರೇಖನಾಥ ರೈ ಹಾಗೂ ಅವರ ಅಕ್ಕ ಪುಷ್ಪಾವತಿ ರೈಯವರ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ಹಸೈನಾರ್ ಎಂಬಾತ ಹಲ್ಲೆ ನಡೆಸಲು ಮುಂದಾಗಿರುವುದಾಗಿ ರೇಖನಾಥ ರೈಯವರು ತಿಳಿಸಿದ್ದಾರೆ. ಇವರ ಹಾಗಾ ಹಸೈನರ್ ಮಧ್ಯೆ ಜಾಗದ ತಕರಾರು ಕಳೆದ ಹಲವು ಸಮಯದಿಂದ ಇತ್ತು ಎನ್ನಲಾಗಿದೆ. ಅದು ವಿಕೋಪಕ್ಕೆ ಹೋಗಿ ತಲ್ವಾರಿನಿಂದ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ಹಾಗೂ ಸಹೋದರನಿಗೆ ತಲ್ವಾರಿನಿಂದ ಹಲ್ಲೆಯತ್ನ
