ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಕುರಿತು ಪೂರ್ವಭಾವಿ ಸಭೆ ಮಾ.29ರಂದು ದೇವಳದ ಅಕ್ಷಯ ಮಂದಿರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಆಮಂತ್ರಣ ಪತ್ರ ಬಿಡುಗಡೆ ಹಾಗೂ ಜಾತ್ರೋತ್ಸವ ಉಪ ಸಮಿತಿಗಳ ರಚನೆ ಮಾಡಲಾಯಿತು.
ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪಿ. ಬಿ. ದಿವಾಕರ ರೈ ಅಧ್ಯಕ್ಷತೆ ವಹಿಸಿದ್ದರು.
ಜಾತ್ರೋತ್ಸವ ಸಮಿತಿಯ ಉಪ ಸಮಿತಿಗಳನ್ನು ರಚಿಸಲಾಯಿತು. ಸಂಪಾಜೆ, ಆಲೆಟ್ಟಿ, ಆರಂತೋಡು, ಉಬರಡ್ಕ, ಮರ್ಕಂಜ ಹಾಗೂ ನೆರೆಯ ಗ್ರಾಮಗಳಲ್ಲಿ ಹಸಿರು ವಾಣಿ ಸಂಗ್ರಹಿಸಲು ಆಯಾ ಗ್ರಾಮದ ಬೈಲುವಾರು ಸಭೆ ಕರೆದು ತಿಳಿಸುವುದು ಹಾಗೂ ಆಮಂತ್ರಣ ಪತ್ರಿಕೆ ಹಂಚುವ ಬಗ್ಗೆ ಚರ್ಚಿಸಲಾಯಿತು. ಅನ್ನದಾನ ಸೇವೆಗೆ ದಾನಿಗಳನ್ನು ಗುರುತಿಸುವ ಕುರಿತು ಸಂತೋಷ್ ಕುತ್ತಮೊಟ್ಟೆ ಹಾಗೂ ಇತರ ವಿಷಯಗಳ ಕುರಿತು ತಿಳಿಸಿದರು.
ಜಾತ್ರೋತ್ಸವ ದಿವಸ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲು ನಿರ್ಧಾರಿಸಲಾಯಿತು.ಬಜೆಟ್ ನೋಡಿಕೊಂಡು ಸಾಂಸ್ಕೃತಿಕ ಕಾರ್ಯಕ್ರನ ನೀಡುವ ತಂಡಗಳನ್ನು ಕರೆಸುವುದು, ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡುವುದಕ್ಕೆ ಎಲ್ಲರೂ ಸಹಕರಿಸಬೇಕೆಂದು ಸಭೆಯಲ್ಲಿ ತಿಳಿಸಲಾಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲು ಮೂಲೆ(ಉಳುವಾರು) ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ದೇವಳದ ವ್ಯವಸ್ಥಾಪನಾ ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು,ದೇವಳದ ವ್ಯವಸ್ಥಾಪಕ ಆನಂದ ಕಲ್ಲಗದ್ದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸದಸ್ಯರಾದ ತೀರ್ಥರಾಮ ಪರ್ನೋಜಿ,ಬಾಲಕೃಷ್ಣ ಕುಂಟುಕಾಡು,ವಸಂತ ಪೆಲ್ತಡ್ಕ,ಸತ್ಯಪ್ರಸಾದ್ ಗಬ್ಬಲ್ಕಜೆ,ಮಾಲತಿ ಬೋಜಪ್ಪ,ಚಂಚಲಾಕ್ಷ್ಮಿ,ಮಾಜಿ ಸದಸ್ಯರಾದ ಕೆ.ಕೆ ನಾರಾಯಣ,ಭವಾನಿಶಂಕರ ಅಡ್ತಲೆ ,ಪ್ರಕಾಶ್ ಪಾನತ್ತಿಲ,ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಭವಾನಿ ಚಿಟ್ಟನ್ನೂರು,ದೀಪಕ್ ಕುತ್ತಮೊಟ್ಟೆ,ಪ್ರಶಾಂತ್ ಕಾಫಿಲ,ರಾಮಕೃಷ್ಣ ಕಿರ್ಲಾಯ,ಎಂ.ಎಲ್ ನಾರಾಯಣ,ವೆಂಕಟರಮಣ ಪೆತ್ತಾಜೆ,ದಯಾನಂದ ಕುರುಂಜಿ,ಗೋವರ್ದನ ಬೊಳ್ಳುರು,ಕಮಲಾಕ್ಷ ಪಡ್ಪು,ಅಯ್ಯಣ್ಣ ಉಳುವಾರು,ಚಂದ್ರಕಲಾ ಕುತ್ತಮೊಟ್ಟೆ,ಸುಂದರ ಬಾಜಿನಡ್ಕ,ಪ್ರವೀಣ ಎಲ್ಪುಕಜೆ, ಜನಾರ್ದನ ಬಾಳೆಕಜೆ,ಜತ್ತಪ್ಪ ಮಾಸ್ತರ್ ಅಳಿಕೆ,ಪುಷ್ಪಾಮೇದಪ್ಪ,ಬಿಂದು ಸುರೇಶ್,ಭಾರತಿ ಪುರುಶೋತ್ತಮ ಉಳುವಾರು,ಜ್ಯೋತಿ ಪಾರೆಪ್ಪಾಡಿ,ಧನಲಕ್ಷ್ಮಿ ಅಮೆಮನೆ,ಲಕ್ಷ್ಕೀಶ ಕುಲ್ಚಾರ್ ಪ್ರಶಾಂತ ಕುಂಟುಕಾಡು,ಜಗದೀಶ ಎಡ್ಚಾರ್,ಮೋನಪ್ಪ ಬಾಳೆಕಜೆ,ಸೀತರಾಮ ಬಾಳೆಕಜೆ,ನಂದಿನಿ ಕೆದಂಬಾಡಿ,ಭವ್ಯ ರಾಜೇಶ್ ಮುಪ್ಪಸೇರು,ದೇವಕಿ ಬಾಳಕಜೆ,ಪ್ರೇಮಲತಾ ಬಾಳೆಕಜೆ,ನಳೀನಿ ಕೇಶವಪ್ರಸಾದ್,ತೀರ್ಥರಾಮ ಮಾಸ್ತರ್ ಅಡ್ಕಬಳೆ,ದೇವಕಿ ಕೋಡಿ,ನಿತ್ಯಾನಂದ ಚೆನ್ನಡ್ಕ,ರಾಧಕ್ರಷ್ಣ ಪಾರೆಮಜಲು,ಗೋಪಾಲಕೃಷ್ಣ ಗುಂಡಿಗದ್ದೆ,ಮೀನಾಕ್ಷಿ,ದೀಪಿಕಾ ಕುಂಟುಕಾಡು,ಕಾವ್ಯ ಪುತ್ಯ ನಮಿತ ಪಿದಮಜಲು,ಚಂದ್ರಶೇಖರ ಜೋಡಿಪಣೆ,ಲಿಂಗರಾಜ ಬಾಳೆಕಜೆ,ಸೋಮಶೇಖರ ಪೈಕ,ಲೋಚನ ಉಳುವಾರು, ಭವಿತ್ ಬಾಳೆಕಜೆ ಶೇಷಗಿರಿ ಉಳುವಾರು,ಭರತ ಸಣ್ಣಮನೆ ಇತರರು ಉಪಸ್ಥಿತರಿದ್ದರು.
ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಪೂರ್ವಭಾವಿ ಸಭೆ
