ಅರೆಭಾಷೆ ಇಂದು ಜಾತಿ, ಗಡಿ ಮೀರಿ ಬೆಳೆಯುತ್ತಿರುವುದು ಸಂತೋಷದ ವಿಚಾರವಾಗಿದೆ.ಇದನ್ನು ಇನ್ನಷ್ಟು ವಿಸ್ತರಿಸಲು ಗಡಿನಾಡ ಉತ್ಸವ ಸೇರಿದಂತೆ ಇನ್ನಿತರ ವಿನೂತನ ಕಾರ್ಯಕ್ರಮಗಳನ್ನು ಅಕಾಡೆಮಿ ವತಿಯಿಂದ ಹಮ್ಮಿಕೊಳ್ಳಲಾಗುವುದು” ಎಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಂಜಿ ಹೇಳಿದರು.
ಅವರು ಮಾ.30ರಂದು ಆಲೆಟ್ಟಿ ಗ್ರಾಮದ ಕುಡೆಕಲ್ಲು ಐನ್ ಮನೆ ವಠಾರದಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ನಡೆದ ಅರೆಭಾಷಿಕರ ಐನ್ ಮನೆ ಐಸಿರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಐನ್ ಮನೆ ಎನ್ನುವುದು ಎಲ್ಲರನ್ನು ಒಗ್ಗೂಡಿಸುವ ಜಾಗ. ಇಲ್ಲಿ ನಮ್ಮ ಸಂಸ್ಕೃತಿ, ಪರಂಪರೆಯನ್ನು ತಿಳಿಸುವುದರೊಂದಿಗೆ ಅರೆಭಾಷೆಯನ್ನು ಕೂಡಾ ಬೆಳೆಸಲು ಪೂರಕವಾದ ಜಾಗವಾದುದರಿಂದ ಐನ್ ಮನೆಯಲ್ಲಿ ಅಕಾಡೆಮಿ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ” ಎಂದು ಅಧ್ಯಕ್ಷರು ಹೇಳಿದರು.
ಕುಡೆಕಲ್ಲು ಐನ್‌ಮನೆಯ ವಂಶವೃಕ್ಷ ಚಾರ್ಟನ್ನು ಅವರು ಅನಾವರಣಗೊಳಿಸಿದರು.
ಕುಡೆಕಲ್ಲು ಕುಟುಂಬದ ಹಿರಿಯರಾದ ಸಾವಿತ್ರಿ ರವೀಂದ್ರನಾಥ್ ಕುಡೆಕಲ್ಲು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಹಿಂಗಾರ ಪತ್ರಿಕೆಯನ್ನು ಆಲೆಟ್ಟಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ದ.ಕ.ಜೇನು ವ್ಯವಸಾಯಗಾರ ಸಹಕಾರ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಟಾರ್, ಅಕ್ರಮ – ಸಕ್ರಮ ಸಮಿತಿ ಸದಸ್ಯೆ ಗೀತಾ ಕೋಲ್ಟಾರ್, ಕುಡೆಕಲ್ಲು ಐನ್ ಮನೆಯ ಮಾಜಿ ಮುಖ್ಯಸ್ಥರಾದ ವಾಸುದೇವ ಗೌಡ ಕುಡೆಕಲ್ಲು, ಸುಳ್ಯ ಗೌಡರ ಯುವ ಸೇವಾ ಸಂಘದ ಉಪಾಧ್ಯಕ್ಷ ಯತಿರಾಜ ಭೂತಕಲ್ಲು, ಆಲೆಟ್ಟಿ ಗ್ರಾಮ ಗೌಡ ಸಮಿತಿ ಅಧ್ಯಕ್ಷ ಸತೀಶ್ ಕೊಯಿಂಗಾಜೆ, ಕುಡೆಕಲ್ಲು ಐನ್ ಮನೆ ಮುಖ್ಯಸ್ಥರಾದ ಬಿಪಿನ್ ಕುಡೆಕಲ್ಲು, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಅಚ್ಚುತ ಮಾಸ್ತರ್ ನಾರ್ಕೋಡು ವೇದಿಕೆಯಲ್ಲಿ ಇದ್ದರು.
ಅಕಾಡೆಮಿ ಸದಸ್ಯರಾದ ಡಾ.ಎನ್.ಎ.ಜ್ಞಾನೇಶ್ ಸ್ವಾಗತಿಸಿದರು. ಕಾರ್ಯಕ್ರಮ ಸದಸ್ಯ ಸಂಯೋಜಕರಾದ ತೇಜ ಕುಮಾರ್ ಕುಡೆಕಲ್ಲು ಪ್ರಾಸ್ತಾವಿಕ ಮಾತನಾಡಿದರು. ಸದಸ್ಯರಾದ ಚಂದ್ರಶೇಖರ ಪೇರಾಲು ಹಿಂಗಾರ ಪತ್ರಿಕೆಯ ಕುರಿತು ಮಾತನಾಡಿದರು.
ಸದಸ್ಯ ಸಂಯೋಜಕರಾದ ವಿನೋದ್ ಮೂಡಗದ್ದೆ ಕಾರ್ಯಕ್ರಮ ನಿರ್ವಹಿಸಿದರು. ಅಕಾಡೆಮಿ ಸದಸ್ಯೆ ಲತಾ ಪ್ರಸಾದ್ ಕುದ್ರಾಜೆ ವಂದಿಸಿದರು.