ಬೆಳ್ತಂಗಡಿ : ಪೊಲೀಸ್ ಹೆಡ್ ಕಾಸ್ಟೇಬಲ್ ಮೂರುಗೋಳಿಯ ಪ್ರವೀಣ್.ಎಂ ಇವರಿಗೆ ಈ ಭಾರಿ ಮುಖ್ಯಮಂತ್ರಿ ಪದಕಕ್ಕೆ ಅಯ್ಕೆ ಅಗಿದ್ದಾರೆ. ಎಪ್ರಿಲ್ 2 ರಂದು ಕರ್ನಾಟಕ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪದಕವನ್ನು ನೀಡಲಿದ್ದಾರೆ.ಬೆಳ್ತಂಗಡಿ ತಾಲೂಕಿನ ಪುತ್ತಿಲ್ಲ ಗ್ರಾಮದ ಮೂರುಗೋಳಿ ನಿವಾಸಿ ಅಣ್ಣು ದೇವಾಡಿಗ ಮತ್ತು ಬೇಬಿ ದೇವಾಡಿಗರ ಮೊದಲ ಮಗ ಪ್ರವೀಣ್.ಎಂ ಇವರು 2002 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡರು. ಮೊದಲು ಕರ್ತವ್ಯವನ್ನು ಮಂಗಳೂರು ಬಂದರು ಪೊಲೀಸ್ ಠಾಣೆಯಲ್ಲಿ ಮಾಡಿದ್ದು ಬಳಿಕ ಬೆಳ್ತಂಗಡಿ ವೃತ್ತ ಕಚೇರಿ, ದಕ್ಷಿಣ ಕನ್ನಡ ಜಿಲ್ಲಾ ಅಪರಾಧ ಪತ್ತೆ ದಳ(DCIB), ಬಂಟ್ವಾಳ ಡಿವೈಎಸ್ಪಿ ವಿಶೇಷ ಅಪರಾಧ ದಳ, ವೇಣೂರು ಪೊಲೀಸ್ ಠಾಣೆ, ಸದ್ಯ ಈಗ ದಕ್ಷಿಣ ಕನ್ನಡ ಸೈಬರ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆ ಎರಡು ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ(NIA) ಜೊತೆಗೆ ಕರ್ತವ್ಯ ನಿರ್ವಹಿಸಿದ್ದಾರೆ
ಪೊಲೀಸ್ ಮೂರುಗೋಳಿಯ ಪ್ರವೀಣ್ .ಎಂ ಅವರಿಗೆ ಮುಖ್ಯಮಂತ್ರಿ ಪದಕ
