ಬೆಳ್ತಂಗಡಿ : ಪ್ರಸಿದ್ಧ ಭಾಗವತರಾದ ಸತೀಶ್ ಆಚಾರ್ಯ(40 ವ) ಇಂದು ಮುಂಜಾನೆ 4 ಗಂಟೆಗೆ ಅಂಡಿಂಜೆ ಬಳಿ ನಡೆದ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾದ ಘಟನೆ ವರದಿಯಾಗಿದೆ.
ಅವರು ಮಂಗಳದೇವಿ ಮೇಳದಲ್ಲಿ ಭಾಗತರಾಗಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರು.
ಸತೀಶ್ ಆಚಾರ್ಯ ಅವರು ಸುಳ್ಯದಲ್ಲಿ ಯಕ್ಷಗಾನ ಕಾರ್ಯಕ್ರಮವನ್ನು ಮುಗಿಸಿ ಇಂದು ಮುಂಜಾನೆ 4 ಗಂಟೆಗೆ ತಮ್ಮ ಬೈಕ್‌ನಲ್ಲಿ ನಾರಾವಿಯಿಂದ ಅಂಡಿಂಜೆಗೆ ಬರುತ್ತಿರುವ ಸಂದರ್ಭದಲ್ಲಿ ಅಂಡಿಂಜೆ ಸಮೀಪ ಎದುರಿನಿಂದ ಬರುತ್ತಿದ್ದ ಬೈಕ್ ಹಾಗೂ ಇವರು ಹೋಗುತ್ತಿದ್ದ ಬೈಕ್ ಪರಸ್ಪರ ಡಿಕ್ಕಿ ಹೊಡೆದುಕೊಂಡು ಈ ದುರ್ಘಟನೆ ನಡೆದಿದೆ.ಸತೀಶ ಆಚಾರ್ಯ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು ಎಂದು ತಿಳಿದು ಬಂದಿದೆ.
ಸುಳ್ಯದಿಂದ ಹೋಗುತ್ತಿದ್ದಾಗ ಪ್ರಸಿದ್ದ ಭಾಗವತ ಸತೀಶ ಆಚಾರ್ಯ ಬೈಕ್ ಅಪಘಾತದಲ್ಲಿ ಸಾವು
