ಸುಳ್ಯ : ಸುಳ್ಯ ತಾಲೂಕು‌ ಗೌಡ ಮಹಿಳಾ ಘಟಕದಿಂದ ಏ.22ಕ್ಕೆ ಮಕ್ಕಳಿಗೆ ಚೆಸ್ ಸ್ಪರ್ಧೆ

ತಾಲೂಕು ಗೌಡ ಮಹಿಳಾ ಘಟಕದ ವತಿಯಿಂದ ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದ್ದು, ಇದೀಗ ಸುಳ್ಯ ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಮಕ್ಕಳಿಗಾಗಿ ಮುಕ್ತ ತಾಲೂಕು ಮಟ್ಟದ ಚೆಸ್ ಸ್ಪರ್ಧೆ ಎ.22 ರಂದು ಸುಳ್ಯ ಕೊಡಿಯಾಲಬೈಲ್ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಸುಳ್ಯ ತಾಲೂಕು ಗೌಡ ಸಂಘ ಮಹಿಳಾ ಘಟಕದ ಅಧ್ಯಕ್ಷೆ ವಿನುತಾ ಪಾತಿಕ್ಕಲ್ಲು ತಿಳಿಸಿದ್ದಾರೆ.
ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿ ಮಾಹಿತಿ ನೀಡಿದರು.
ಒಂದನೇ ತರಗತಿಯಿಂದ ಹತ್ತನೆಯ ತರಗತಿ ವರೆಗಿನ ಶಾಲಾ ಮಕ್ಕಳಿಗಾಗಿ ಈ ಚೆಸ್ ಸ್ಪರ್ಧೆಯನ್ನು ಆಯೋಜನೆ ಮಾಡುಲಾಗುತ್ತಿದೆ.ಒಂದನೆಯ ತರಗತಿಯಿಂದ ಐದನೇ ತರಗತಿ ಮಕ್ಕಳಿಗೆ ಕಿರಿಯ ಪ್ರಾಥಮಿಕ ವಿಭಾಗ ಆರನೇ ತರಗತಿಯಿಂದ 8ನೇ ತರಗತಿ ಯವರೆಗಿನ ಹಿರಿಯ ಪ್ರಾಥಮಿಕ ವಿಭಾಗ ಹಾಗೂ ಒಂಭತ್ತನೆಯ ಮತ್ತು ಹತ್ತನೆಯ ತರಗತಿ ಮಕ್ಕಳಿಗೆ ಪ್ರೌಢಶಾಲಾ ವಿಭಾಗದಲ್ಲಿ ಚೆಸ್ ಪಂದ್ಯಾಟ ನಡೆಯಲಿದೆ.ಹೆಣ್ಣು ಮತ್ತು ಗಂಡು ಮಕ್ಕಳ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ.ಎಲ್ಲಾ ಸಮಾಜದ ವಿದ್ಯಾರ್ಥಿಗಳಿಗೆ ಈ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ರೂ 100 ಪ್ರವೇಶ ಶುಲ್ಕ ಇರಿಸಲಾಗಿದೆ.
ಚೆಸ್‌ ಪಂದ್ಯಾಟದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಎ.20 ರೊಳಗೆ ಹೆಸರು ನೊಂದಾಯಿಸಿ ಕೊಳ್ಳಬೇಕು ಅಲ್ಲದೇ ಚೆಸ್ ಆಟ ಆಡುವ ವಿದ್ಯಾರ್ಥಿಗಳು ಚೆಸ್ ಬೋರ್ಡ್ ಅವರೇ ತರಬೇಕೆಂದು ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.
ಗೋಷ್ಠಿಯಲ್ಲಿ ಗೌಡ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸವಿತಾ ಸಂದೇಶ್,ಕೋಶಾಧಿಕಾರಿ ಜಯಶ್ರೀ ರಾಮಚಂದ್ರ ಪಲ್ಲತ್ತಡ್ಕ,ಉಪಾಧ್ಯಕ್ಷೆ ಮೀನಾಕ್ಷಿ ಆರ್, ಸಂಘಟಕರಾದ ಭಾರತಿ ಉಳುವಾರು,ಪುಷ್ಪಾಲತ ದೇವರಗುಂಡ, ಕುಸುಮಾವತಿ,ಜನಾರ್ದನ,ಸುಪ್ರಿತ್ ಮೊಂಟಡ್ಕ ಉಪಸ್ಥಿತರಿದ್ದರು.

Ad Widget . Ad Widget
Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top