ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ಕಾಲಾವಧಿ ಜಾತ್ರೋತ್ಸವ ಏ.13ರಿಂದ ಧ್ವಜಾರೋಹಣದ ಮೂಲಕ ಆರಂಭಗೊಳ್ಳಲಿದ್ದು ಜಾತ್ರೋತ್ಸವ ಪೂರ್ವ ತಯಾರಿ ಅಂಗವಾಗಿ ಮಂಗಳವಾರ ದೇವಳದಲ್ಲಿ ಅಲಂಕಾರ ಸಮಿತಿಯ ಸಭೆ ನಡೆಯಿತು.
ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ
ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಕೊಳಲುಮೂಲೆ (ಉಳುವಾರು)ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೆ.ಕೆ ಬಾಲಕ್ರಷ್ಣ ಕುಂಟುಕಾಡು,ತಿಮ್ಮಯ್ಯ ಮೆತ್ತೆಡ್ಕ, ವಸಂತ ಪೆಲ್ತಡ್ಕ,ಮ್ಯಾನೇಜರ್ ಆನಂದ ಕಲ್ಲಗದ್ದೆ, ಅಲಂಕಾರ ಸಮಿತಿ ಸಂಚಾಲಕ ಸೋಮಶೇಖರ ಪೈಕ, ಸಹ ಸಂಚಾಲಕ ಭಾನುಪ್ರಕಾಶ್ ,ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಪೂಜಾರಿ,ಪೋಸ್ಟ್ ಮಾಸ್ತರ್ ದೇವಪ್ಪ ಹೈದಂಗೂರು
ಹಾಗೂ ಜನಾರ್ದನ ಬಾಳೆಕಜೆ,ನಾರಾಯಣ ಮಣಿಮುಂಡ,ಲಕ್ಚ್ಮಣ ಪಿದಮಜಲು,ನವೀನ ಕುತ್ತಮೊಟ್ಟೆ,ರವಿ,ಸಲೀತ್ ಕುಮಾರ್ ,ವಾಸುದೇವ ಕಲ್ಲಂಬಳ,ಯಕ್ಷಿತ್ ಇತರರು ಉಪಸ್ಥಿತರಿದ್ದರು.
ಏ.13ರಿಂದ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ಕಾಲಾವಧಿ ಜಾತ್ರೋತ್ಸವ ಆರಂಭ ಹಿನ್ನಲೆ, ಅಲಂಕಾರ ಸಮಿತಿ ಸಭೆ
