ಬೆಂಗಳೂರು: ರಾಜ್ಯದ ವಿವಿಧೆಡೆಗಳಲ್ಲಿ ಗುಡುಗು ಸಹಿತ ಗಾಳಿ ಮಳೆಯಾಗಿದ್ದು, ಮೂವರು ಸಿಡಿಲು ಬಡಿದು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಕೊಪ್ಪಳದ ಸಿಂದೋಗಿಯಲ್ಲಿ ಕೆಲಸ ಮಾಡಲು ಹೊಲಕ್ಕೆ ತೆರಳಿದ್ದ ಇಬ್ಬರು ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ಗುರುವಾರ ವರದಿಯಾಗಿದೆ. ಕೊಪ್ಪಳದ ಗೌರಿ ಅಂಗಳದ ನಿವಾಸಿಗಳಾದ ಮಂಜುನಾಥ್ ರಾಮಲಿಂಗಪ್ಪ (48) ಹಾಗೂ ಗೋವಿಂದಪ್ಪ ಮ್ಯಾಗಲಮನಿ(62) ಮೃತಪಟ್ಟವರಾಗಿದ್ದಾರೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಂಡೆಬಸಾಪುರ ತಾಂಡದಲ್ಲಿ ಯುವನೊಬ್ಬ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ. ಬಂಡೆಬಸಾಪುರ ಗ್ರಾಮದ ಪಾಂಡುನಾಯ್ಕ್(18) ಮೃತಪಟ್ಟ ಯುವಕನಾಗಿದ್ದಾನೆ.
ಮಳೆ ಬರುತ್ತಿದ್ದ ವೇಳೆ ಮನೆಯ ಬಳಿ ಯುವಕ ನಿಂತಿದ್ದ, ಈ ವೇಳೆ ಏಕಾಏಕಿ ಸಿಡಿಲು ಬಡಿದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸಿಡಿಲಿನ ತೀವ್ರತೆಗೆ ಮನೆಯ ಗೋಡೆಗಳಿಗೂ ಹಾನಿಯಾಗಿವೆ.
ಸಿಡಿಲು ಬಡಿದು ಮೂವರು ಸಾವು
