ಏ.16ಕ್ಕೆ ದೀನ್ ದಯಾಳ್ ಸಹಕಾರ ಸಂಘ ನಿಯಮಿತ ಸುಳ್ಯ ಇದರ ವತಿಯಿಂದ ಪಾಲು ಬಂಡವಾಳ ಪ್ರಮಾಣ ಪತ್ರ ವಿತರಣೆ

ಸುಳ್ಯದ ರಥಬೀದಿಯ ಟಿ.ಎ.ಪಿ.ಸಿ.ಎಂ.ಎಸ್. ಕಟ್ಟಡದ 2ನೇ ಮಹಡಿ ಯಲ್ಲಿ ಕಾರ್ಯನಿರ್ವಹಿಸುತ್ತಿರುವ ದೀನ ದಯಾಳ್ ಸಹಕಾರ ಸಂಘ ನಿಯಮಿತ ಸುಳ್ಯ ಇದರ ವತಿಯಿಂದ ಪಾಲು ಬಂಡವಾಳ ಪ್ರಮಾಣ ಪತ್ರ ವಿತರಣೆ ಮತ್ತು ಭಾರತ್ ಒನ್ ಜನ ಸಂಪರ್ಕ ಕೇಂದ್ರದ ಉದ್ಘಾಟನೆ ಕಾರ್ಯಕ್ರಮವು ಎ.16 ರಂದು ನಡೆಯಲಿದೆ.
ದಿನ ದಯಾಳ್ ಸಹಕಾರ ಸಂಘ ನಿಯಮಿತ ಸುಳ್ಯ 2024 ಡಿ.7 ರಂದು ಉದ್ಘಾಟನೆಗೊಂಡಿದ್ದು, ಇದೀಗ ಸಹಕಾರ ಸಂಘದ ಅಡಿಯಲ್ಲಿ ಕೇಂದ್ರ ಸರಕಾರದ ಭಾರತ್ ಒನ್ ಜನ ಸಂಪರ್ಕ ಕೇಂದ್ರ ಮಂಜೂರಾತಿಗೊಂಡಿರುತ್ತದೆ. ಸಹಕಾರ ಸಂಘದ ಕಛೇರಿಯ ಪಕ್ಕದಲ್ಲಿ ಜನ ಸಂಪರ್ಕ ಕೇಂದ್ರವನ್ನು ಪ್ರಾರಂಭಿಸಲು ಉದ್ದೇಶಿಸಿ, ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದಿಂದ ಕೊಡಲ್ಪಡುವ ಯೋಜನೆಗಳ ಸೌಲಭ್ಯವನ್ನು ಜನ ಸಾಮಾನ್ಯರಿಗೆ ಅತ್ಯಂತ ಸುಲಭದಲ್ಲಿ ತಲುಪಿಸುವ ಉದ್ದೇಶದಿಂದ ಎ.16 ರಂದು ಸುಳ್ಯದ ಸಿ.ಎ ಬ್ಯಾಂಕ್‌ ಸಭಾಂಗಣದಲ್ಲಿ ಪಾಲುಬಂಡವಾಳ ಪ್ರಮಾಣ ಪತ್ರ ವಿತರಣೆ ಮತ್ತು ಭಾರತ್ ಒನ್ ಜನ ಸಂಪರ್ಕ ಕೇಂದ್ರದ ಉದ್ಘಾಟನೆ ನಡೆಯಲಿದೆ ಎಂದು ಮಾಜಿ ಸಚಿವ ದೀನ್ ದಯಾಳ್ ಸಹಕಾರ ಸಂಘ ಅಧ್ಯಕ್ಷರಾದ ಎಸ್. ಅಂಗಾರ ತಿಳಿಸಿದ್ದಾರೆ.
ಸುಳ್ಯ ದ ತಹಶೀಲ್ದಾರರಾದ ಕು.ಮಂಜುಳಾ ಉದ್ಘಾಟನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮ ದ ಅಧ್ಯಕ್ಷತೆ ದೀನ ದಯಾಳ್ ಸಹಕಾರ ಸಂಘ ಅಧ್ಯಕ್ಷರಾದ ಎಸ್. ಅಂಗಾರ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನಗರ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ನೀರಬಿದಿರೆ, ಸಿ.ಎ. ಬ್ಯಾಂಕ್ ಅಧ್ಯಕ್ಷರಾದ ವಿಕ್ರಂ ಅಡ್ಡಂಗಾಯ ಉಪಸ್ಥಿತರಿರಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ ಮಾಹಿತಿಯನ್ನು ಪಡೆದುಕೊಳ್ಳಬೇಕಾಗಿ ಅವರು ವಿನಂತಿಸಿಕೊಂಡಿದ್ದಾರೆ.

Ad Widget . Ad Widget
Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget Ad Widget . Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top