ಸುಳ್ಯ ಸೀಮೆ ಮಹತೋಭಾರ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಅಂಗವಾಗಿ ಆರಾಟ ಮಹೋತ್ಸವ ಏ.19ರಂದು ಶ್ರದ್ಧಾ ಭಕ್ತಿಯಿಂದ ನಡೆಯಿತು.
ಏ.18ರಂದು ರಾತ್ರಿ ಬಲಿ ಹೊರಟು ವಾಲಸಿರಿ ಉತ್ಸವ ನಡೆಯಿತು.ಏ.19ರಂದು ಬೆಳಿಗ್ಗೆ 7 ಗಂಟೆಗೆ ಆರಾಟ ಬಾಗಿಲು ತೆರೆಯಲಾಯಿತು.ಸಂಜೆ 5 ಗಂಟೆಗೆ ಮಿತ್ತೂರು ನಾಯರ್ ದೈವದ ಭಂಡಾರ ಆಗಮಿಸಿತು.
ರಾತ್ರಿ ಉತ್ಸವ ಬಲಿ ನಡೆದು ಅವಭ್ರತ ಸ್ನಾನವಾಗಿ ಬಂದು ದರ್ಶನ ಬಲಿ,ಬಟ್ಟಲು ಕಾಣಿಕೆ,ಧ್ವಜ ಆವರೋಹಣ ನಡೆಯಿತು.
ಏ.20ರಂದು ಮಧ್ಯಾಹ್ನ ಸಂಪ್ರೋಕ್ಷಣೆ,ಮಂತ್ರಾಕ್ಷತೆ ನಡೆಯಿತು.
ಭಕ್ತರು ಆಧಿಕ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಆರಾಟ ಮಹೋತ್ಸವಕ್ಕೆ ವರುಣ ದೇವನ ಕ್ರಪೆ
ದೇವರ ಉತ್ಸವ ಬಲಿ ಮಗಿದು ಅವಭ್ರತ ಸ್ನಾನಕ್ಕೆ ಹೊರಡುವ ಸಂದರ್ಭದಲ್ಲಿ ಮಳೆ ಹನಿಯ ಸಿಂಚನ ಆರಂಭವಾಗಿ ದೇವರು ಜಳಕವಾಗಿ ಬರುವ ತನಕ ಮಳೆ ಹನಿ ಬೀಳುತ್ತಿದ್ದವು.
ಪ್ರತಿವರ್ಷ ಆರಾಟ ಮಹೋತ್ಸವ ದಿವಸ ತೊಡಿಕಾನದಲ್ಲಿ ಮಳೆ ಬರುತ್ತದೆ ಎಂದು ಇಲ್ಲಿಯ ಭಕ್ತರ ನಂಬಿಕೆ.ಈ ವರ್ಷವು ಮಳೆ ಹನಿಗಳು ಬಿದ್ದಿವೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.
ಆರಾಟ ಮಹೋತ್ಸವದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಕೊಳಲುಮೂಲೆ, ಜೀರ್ಣೊದ್ದಾರ ಸಮಿತಿ ಅಧ್ಯಕ್ಷ ಪಿ.ಬಿ ದಿವಾಕ ರೈ,ಜಾತ್ರೋತ್ಸವ ಸಮಿತಿ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ,ಕಾರ್ಯನಿರ್ವಾಹಣಾಧಿಕಾರಿ ಅವಿನ್ ರಂಗತ್ ಮಲೆ, ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ,ಬಿಜೆಪಿ ಶಾಸಕಾಂಗ ಪಕ್ಷದ ಕಾರ್ಯದರ್ಶಿ ಸಿ.ಟಿ ಸುರೇಶ ,ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು,ವ್ಯವಸ್ಥಾಪನಾ ಸಮಿತಿ ಸದಸ್ಯರಾರ ಕೇಶವಮೂರ್ತಿ(ಪ್ರ.ಅರ್ಚಕರು) ತೀರ್ಥರಾಮ ಯು.ಕೆ, ಉಳುವಾರು,ಸತ್ಯಪ್ರಸಾದ್ ಗಬ್ಬಲ್ಕಜೆ,ಕೆ.ಕೆ ಬಾಲಕೃಷ್ಣ ಕುಂಟುಕಾಡು,ತಿಮ್ಮಯ್ಯ ಮೆತ್ತಡ್ಕ,ವಸಂತ ಪೆಲ್ತಡ್ಕ,ಮಾಲತಿ ಬೋಜಪ್ಪ ಹಾಸ್ಪಾರೆ,ಚಂಚಲಾಕ್ಷಿ ನಾಗೇಂದ್ರ ಕುಲ್ಚಾರ್,
ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೆ.ಕೆ ನಾರಾಯಣ ಕುಂಟುಕಾಡು,ಭವಾನಿಶಂಕರ ಅಡ್ತಲೆ,ಎ.ಜಿ ಉಮಾಶಂಕರ, ಎಸ್.ಪಿ ಲೋಕನಾಥ,ಪ್ರಕಾಶ್ ಪಾನತ್ತಿಲ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಭವಾನಿ ಚಿಟ್ಟನ್ನೂರು,ಸದಸ್ಯ ರವೀಂದ್ರ ಪೂಜಾರಿ ದೇವಳದ ವ್ಯವಸ್ಥಾಪಕ ಆನಂದ ಕಲ್ಲಗದ್ದೆ .ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಪ್ರಶಾಂತ್ ಕಾಫಿಲ,ಸಿಬ್ಬಂದಿಗಳು ಸುಳ್ಯ ಸೀಮೆಯ ಭಕ್ತರು ಉಪಸ್ಥಿತರಿದ್ದರು.
ಶ್ರದ್ಧಾ ಭಕ್ತಿಯಿಂದ ನಡೆದ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಆರಾಟ ಮಹೋತ್ಸವ
