ಬೆಂಗಳೂರು: ಹೆತ್ತವರ ವಿರೋಧ ನಡುವೆಯೂ ಸರಿಗಮಪ ಖ್ಯಾತಿಯ ಪೃಥ್ವಿ ಭಟ್ ಪ್ರೀಯಕರನ ಕೈ ಹಿಡಿದು ಸಪ್ತಪದಿ ತುಳಿದಿದ್ದಾರೆ. ಇದರ ಮಧ್ಯೆ ತಂದೆ ಶಿವಪ್ರಸಾದ್ ಭಟ್ ಅವರು ಆಡಿಯೋ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರು. ಅದರಲ್ಲಿ ಮಗಳು ಹಾಗೂ ಆಕೆಯ ಸಂಗೀತ ಗುರು ನರಹರಿ ದೀಕ್ಷಿತ್ ಅವರ ಬಗ್ಗೆ ಸಾಲು ಸಾಲು ಆರೋಪಗಳನ್ನು ಮಾಡಿದ್ದರು. ತಂದೆಯ ಆಡಿಯೋ ವೈರಲ್ ಆದ ಬೆನ್ನಲ್ಲೇ ಇದೀಗ ಗಾಯಕಿ ಪೃಥ್ವಿ ಭಟ್ ತಂದೆಗೆ ಕಳುಹಿಸಿರುವ ಆಡಿಯೋ ವೈರಲ್ ಆಗಿದೆ.
ಪೃಥ್ವಿ ಭಟ್ ಮನೆಯವರ ವಿರೋಧದ ನಡುವೆ ಮಾರ್ಚ್ 27ರಂದು ಝೀ ಕನ್ನಡ’ ವಾಹಿನಿಯಲ್ಲಿಯೇ ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಅಭಿಷೇಕ್ ಅನ್ನುವವರನ್ನು ಪ್ರೇಮ ವಿವಾಹ ಆಗಿದ್ದರು. ಈ ಬಗ್ಗೆ ಪೃಥ್ವಿ ಅವರ ತಂದೆ ಶಿವಪ್ರಸಾದ್ ಅವರು ಸುಧೀರ್ಘವಾದ ಆಡಿಯೋ ರೆಕಾರ್ಡ್ ಮಾಡಿ ಆಕ್ರೋಶ ಹೊರ ಹಾಕಿದ್ದರು. ಈ ಬೆನ್ನಲ್ಲೇ ಈ ಪೃಥ್ವಿ ಭಟ್ ಸ್ಪಷ್ಟನೆ ನೀಡಿದ್ದಾರೆ.
ಅದರಲ್ಲಿ ಹಾಯ್ ಅಪ್ಪಾ. ಸಾರಿ ನೀವು ಆಲ್‌ರೆಡಿ ಎರಡು ದಿನದಿಂದ ಹವ್ಯಕ ಗ್ರುಪ್‌ಲ್ಲಿ ಮತ್ತೆ ಬೇರೆ ಬೇರೆ ಗ್ರುಪ್‌ಲ್ಲಿ ನರಹರಿ ದೀಕ್ಷಿತ್ ಸರ್ ಬಗ್ಗೆ ಮತ್ತೆ ನನ್ನ ಬಗ್ಗೆ ಆಡಿಯೋ ಮೆಸೇಜ್ ಎಲ್ಲಾ ಕಳಿಸುತ್ತಿದ್ದೆ. ಈ ವಿಷಯದಲ್ಲಿ ನರಹರಿ ದೀಕ್ಷಿತ್‌ರದ್ದು ಏನೂ ತಪ್ಪಿಲ್ಲ. ನಾನು ಮೊದಲು ಹೇಳಂಗೆ, ಈಗಲೂ ಹೇಳಿದ್ದೀನಿ, ದೀಕ್ಷಿತ್ ಸರ್‌ದು
ಮಾರ್ಚ್ 7ಕ್ಕೆ ದೀಕ್ಷಿತ್ ಸರ್ ಮನೆಗೆ ಬಂದಿದ್ದು, ಈ ವಿಷಯ ಬಗ್ಗೆ ಮಾತ್ನಾಡಿದ್ರು. ಆಗ ನಾನು ಅವರ ಎದುರೇ ಮತ್ತೆ ನಿಮ್ಮ ಎದುರೇ ನನಗೆ ಅಭಿ ಇಷ್ಟ ಅಂತಾನೇ ಹೇಳಿದ್ದು. ಅವತ್ತು ನಿಮ್ಮ ಮೇಲಿನ ಭಯಕ್ಕೆ ನಾನು ಸುಮ್ಮನಾದೆ, ಆದರೆ ನನ್ನ ಮನಸಿನಲ್ಲಿ ಅಭಿ ಇದ್ದರು ಎಂದು ಹೇಳಿದ್ದಾರೆ. ಅಲ್ಲದೆ ಶೋಗಳಿಗೂ ಬೇಡ ಅಂತ ಹೇಳುತ್ತಿದ್ರಿ, ನನಗೆ ಹೆದರಿಕೆ ಶುರುವಾಯ್ತು ಹಾಗಾಗಿ ಮನೆ ಬಿಟ್ಟು ಬಂದೆ. ನಮ್ಮ ಮದುವೆಗೂ ನರಹರಿ ದೀಕ್ಷಿತ್ ಸರ್‌ಗೂ ಯಾವುದೇ ಸಂಬಂಧವಿಲ್ಲ. ಸಾಧ್ಯವಾದರೆ ನನ್ನನ್ನು ಕ್ಷಮಿಸಿ ನನ್ನಿಂದ ತಪ್ಪಾಗಿದೆ” ಎಂದು ಪೃಥ್ವಿ ಭಟ್ ಆಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಪ್ರಿಯಕರನ ಕೈ ಹಿಡಿದ ಸರಿಗಮಪ ಖ್ಯಾತಿಯ ಪೃಥ್ವಿ ಭಟ್
