ಸುಳ್ಯ ಶ್ರೀ ಗುರು ರಾಘವೇಂದ್ರ ಮಠದ 7ನೇ ವರ್ಷದ ಪ್ರತಿಷ್ಠಾ ವಾರ್ಷಿಕ ಮಹೋತ್ಸವದ ಅಂಗವಾಗಿ ಏ.21 ರಂದು ಪಲ್ಲಕ್ಕಿಯಲ್ಲಿ ರಾಯರ ವೈಭವದ ಪಟ್ಟಣ ಸವಾರಿ ಸುಳ್ಯದ ಮುಖ್ಯ ರಸ್ತೆಯಲ್ಲಿ ನಡೆಯಿತು.
ಚೆಂಡೆ, ಡೋಲು, ವಾದ್ಯ ಮೇಳ, ಆಕರ್ಷಕ ಭಜನೆ, ದೀಪಗಳ ಸಾಲು, ಭಜನೆಯೊಂದಿಗೆ
ಭಕ್ತರೊಂದಿಗೆ ರಾಯರನ್ನು ಪಲ್ಲಕಿಯಲ್ಲಿ ಕುಳ್ಳಿರಿಸಿ ಪಟ್ಟಣ ಸವಾರಿ ಮಾಡಲಾಯಿತು. ಶ್ರೀ ಗುರು ರಾಘವೇಂದ್ರ ಮಠದಿಂದ ಹೊರಟ ಪಟ್ಟಣ ಸವಾರಿಗೆ
ಯುವಜನ ಸಂಯುಕ್ತ ಮಂಡಳಿ, ಶ್ರೀಹರಿ ಕಾಂಪ್ಲೆಕ್ಸ್, ಬಸ್ ನಿಲ್ದಾಣದ ಬಳಿಯಲ್ಲಿ ಹಾಗು ಚೆನ್ನಕೇಶವ ದೇವಸ್ಥಾನದ ಬಳಿಯಲ್ಲಿ ಭಕ್ತರು ಸ್ವಾಗತ ನೀಡಿದರು.
ಬಳಿಕ ರಾಘವೇಂದ್ರ ಮಠಕ್ಕೆ ಪಟ್ಟಣ ಸವಾರಿ ಹಿಂತಿರುಗಿತು. ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಎಂ.ಎನ್.ಶ್ರೀಕೃಷ್ಣ ಸೋಮಯಾಗಿ, ಪದಾಧಿಕಾರಿಗಳು, ಟ್ರಸ್ಟಿಗಳು ಮತ್ತಿತರರು ಉಪಸ್ಥಿತರಿದ್ದರು.
ಮಠದ ಪ್ರಧಾನ ಆರ್ಚಕರಾದ ವೇದ ಮೂರ್ತಿ ಶ್ರೀಹರಿ ಎಳಚಿತ್ತಾಯರ ಮಾರ್ಗದರ್ಶನದಲ್ಲಿ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ನಡೆಯುತ್ತಿದೆ.