ಸುಳ್ಯ ಶ್ರೀ ಗುರು ರಾಘವೇಂದ್ರ ಮಠದ 7 ನೇ ವರ್ಷದ ಪ್ರತಿಷ್ಠಾ ವಾರ್ಷಿಕ ಮಹೋತ್ಸವದ ಎರಡನೇಯ ದಿನದಂದು ಶ್ರೀಗುರುರಾಘವೇಂದ್ರಾನುಗ್ರಹ ಮೊದಲ ಪ್ರಶಸ್ತಿ ಪ್ರದಾನ ಸಮಾರಂಭವು ಎ.22 ರಂದು ಮಠದ ಸಭಾಭವನದಲ್ಲಿ ನಡೆಯಿತು.
ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಸಭಾ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಆಶೀರ್ವಚನ ನೀಡಿದರು.
ಗ್ರೀನ್ ಹೀರೋ ಆಫ್ ಇಂಡಿಯಾ ಪರಿಸರ ತಜ್ಞರಾದ ಡಾ.ಆರ್.ಕೆ.ನಾಯರ್ ರವರಿಗೆ ಸ್ವಾಮೀಜಿಯವರ ಸಮ್ಮುಖದಲ್ಲಿ ಮಠದ ವತಿಯಿಂದ ಪ್ರದಾನ ಮಾಡಲಾಗುವ ಪ್ರಥಮ ವರ್ಷದ ಶ್ರೀಗುರುರಾಘವೇಂದ್ರಾನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಆರ್ಯಭಟ ಪ್ರಶಸ್ತಿ ಪುರಸ್ಕೃತ ಮಠದ ಬೃಂದಾವನಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶ್ರೀಕೃಷ್ಣ ಸೋಮಯಾಗಿ ಯವರು ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್, ಟ್ರಸ್ಟಿ ಸುಬ್ರಹ್ಮಣ್ಯ ಮೂಡಿತ್ತಾಯ,ಕಾರ್ಯದರ್ಶಿ ರಾಮ್ ಕುಮಾರ್ ಹೆಬ್ಬಾರ್,ಕೋಶಾಧಿಕಾರಿ ಮುರಳೀಕೃಷ್ಣ ಡಿ.ಆರ್ ಹಿರಿಯರಾದ ಗಂಗಾಧರ ಮಟ್ಟಿ ಉಪಸ್ಥಿತರಿದ್ದರು.
ತನ್ಮಯಿ ಪ್ರಾರ್ಥಿಸಿದರು. ಜಯಶೀಲಾ ಕೊಳತ್ತಾಯ ರವರು ಸ್ವಾಗತಿಸಿದರು. ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ಅಭಿನಂದನಾ ಮಾತುಗಳನ್ನಾಡಿದರು. ರಾಮ್ ಕುಮಾರ್ ಹೆಬ್ಬಾರ್ ವಂದಿಸಿದರು. ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನ ರಾಯರಿಗೆ ಅಲಂಕಾರ ಮಹಾಪೂಜೆಯಾಗಿ ಪ್ರಸಾದ ವಿತರಣೆ ನಡೆಯಿತು.ನಂತರ ಸಾರ್ವಜನಿಕ ಅನ್ನ ಸಂತರ್ಪಣೆಯು ನಡೆಯಿತು.
ಸುಳ್ಯ : ಡಾ.ಆರ್.ಕೆ ನಾಯರ್ ರವರಿಗೆ ಶ್ರೀಗುರುರಾಘವೇಂದ್ರಾನುಗ್ರಹ ಮೊದಲ ಪ್ರಶಸ್ತಿ ಪ್ರದಾನ
