ಜಮ್ಮು ಕಾಶ್ಮೀರದಲ್ಲಿ ಏ.22ರಂದು ನಡೆದ ಹತ್ಯಾಕಾಂಡ ಖಂಡಿಸಿ ಆರಂತೋಡು ಪೇಟೆ ಸಂಪೂರ್ಣ ಬಂದ್ ಮಾಡಿ ಏ.24ರಂದು ಸಾರ್ವಜನಿಕರು ಅರಂತೋಡಿಲ್ಲಿ ಪ್ರತಿಭಟನೆ ಸಭೆ ನಡೆಸಿದರು.
ಕಾಶ್ಮೀರದಲ್ಲಿ ನಡೆದ ಹತ್ಯಾಕಾಂಡವನ್ನು ಪ್ರತಿಭಟಿಸಿ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದರು. ಪ್ರತಿಭಟನಾ ಸಭೆ ನಡೆಸಿ ಉಗ್ರರ ಜಿಹಾದಿ ಕೃತ್ಯವನ್ನು ತೀವ್ರವಾಗಿ ಖಂಡಿಸಲಾಯಿತು. ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಆರಂತೋಡು ಸಹಕಾರಿ ಸಂಘದ ಅಧ್ಯಕ್ಷ ರಾದ ಸಂತೋಷ ಕುತ್ತಮೊಟ್ಟೆ, ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಕೇಶವ ಅಡ್ತಲೆ, ಬಿ. ಜೆ. ಪಿ. ಮಂಡಲ ಸಮಿತಿ ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ, ಗುತ್ತಿಗಾರು ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸತೀಶ್ ನಾಯ್ಕ ಮಾತಾಡಿದರು. ಗ್ರಾಮ ಪಂಚಾಯತ್ ಸದಸ್ಯ ವೆಂಕಟರಮಣ ಪೆತ್ತಾಜೆ ಎಲ್ಲರನ್ನು ಸ್ವಾಗತಿಸಿದರು. ಸಭೆಯ ಕೊನೆಯಲ್ಲಿ ಕಾಶ್ಮೀರದಲ್ಲಿ ಮಾಡಿದರೀಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರತಿಭಟನೆ ನೇತೃತ್ವವನ್ನು ಹಿರಿಯ ಬಿ. ಜೆ. ಪಿ. ಕಾರ್ಯಕರ್ತ ದಯಾನಂದ ಕುರುಂಜಿ ವಹಿಸಿದ್ದರು ಪ್ರತಿಭಟನೆ ಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದು ಪರಿವಾರ ಸಂಘಟನೆಯ ಕಾರ್ಯಕರ್ತರು,ನಾಗರೀಕರು ಭಾಗವಹಿಸಿದ್ದರು.