ಶನಿವಾರ ಸಂಜೆ ಸುರಿದ ಭಾರೀ ಗಾಳಿಗೆ ಬಳ್ಪ ಶ್ರೀ ಧರ್ಮಶಾಸ್ತಾ ಭಜನಾ ಮಂಡಳಿಯ ಮೇಲ್ಪಾವಣಿ ಸಂಪೂರ್ಣ ಧ್ವಂಸಗೊಂಡಿದೆ.
ಸುಮಾರು 1.5 ಲಕ್ಷ ಕ್ಕೂ ಮಿಕ್ಕಿವೆಚ್ಚದಲ್ಲಿ ನಿರ್ಮಾಣವಾದ ಭಜನಾ ಮಂದಿರದ ಶೀಟಿನ ಮಾಡು ಇದಾಗಿದ್ದು, ಸಂಪೂರ್ಣ ನಾಶವಾಗಿರುವುದಾಗಿ ತಿಳಿದುಬಂದಿದೆ.
ಇದಲ್ಲದೆ ಸ್ಥಳೀಯ ರೈತರ ತೋಟಗಳಿಗೆ ಹಾನಿಯಾಗಿದ್ದು ಅಪಾರ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಗಾಳಿ ಮಳೆಗೆ ಭಜನಾ ಮಂದಿರದ ಮೇಲ್ಬಾವಣಿ ಕುಸಿತ
