ಸುಳ್ಯದ ಅಚಲ್ ಬಿಳಿನೆಲೆ ಬಿಹಾರದ “ಸ್ವಾಮಿ ತೇಜೋಮಯಾನಂದ ಸ್ಕೂಲ್ ಆಫ್ ಯೋಗ ಟ್ರೇಡಿಷನ್” ನಲ್ಲಿ ನಡೆಯಲಿರುವ ಸ್ಪಿಕ್ ಮೆಕೆ ಗುರುಕುಲ್ ಅನುಭವ್ ಸ್ಕಾಲರ್ ಶಿಪ್ 2025”ಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳು ಹಿಂದಿನ ಕಾಲದ ಗುರುಕುಲ ಶಿಕ್ಷಣ ಸಂಪ್ರದಾಯದ ಅನುಭವ ಪಡೆಯುವ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಶ್ರೇಷ್ಟ ಗುರುಗಳ ಜೀವನ ವಿಧಾನಕ್ಕೆ ಒಡ್ಡಿಕೊಳ್ಳುವ ಪ್ರಯತ್ನವಾಗಿರುವ ಈ ಯೋಜನೆಯು ಬೇಸಿಗೆ ರಜೆಯಲ್ಲಿ ಒಂದು ತಿಂಗಳ ಕಾಲ ತಮ್ಮ ಕಲಾ ಕ್ಷೇತ್ರದ ಗುರುವಿನೊಂದಿಗಿದ್ದು ಅಭ್ಯಾಸ ಮಾಡುವ ವಿಭಿನ್ನ ಅವಕಾಶವನ್ನು ಒದಗಿಸುತ್ತದೆ.
ಸುಮಾರು 47 ವರ್ಷಗಳಿಂದ ಯುವಜನರಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ಸಂಸ್ಕ್ರತಿಯ ಪ್ರಚಾರಕ್ಕಾಗಿ ಕಾರ್ಯನಿರ್ವಹಿಸುತ್ತಿರುವ “ಸ್ಪಿಕ್ ಮೆಕೆ”ಯ ಕೇಂದ್ರ ಕಛೇರಿ ನವದೆಹಲಿಯಲ್ಲಿದೆ.
ಆರಂಭದಲ್ಲಿ ಅರ್ಜಿಗಳನ್ನು ಆಹ್ವಾನಿಸಿ ಬಂದಂತಹ 500 ಅರ್ಜಿಗಳಲ್ಲಿ 200 ನ್ನು ಶಾರ್ಟ್ ಲಿಸ್ಟ್ ಮಾಡಿ ಅಂತಿಮವಾಗಿ
ಈ ಸ್ಕಾಲರ್ ಶಿಪ್ ಗೆ ಮೂರು ಹಂತದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಆರಂಭದಲ್ಲಿ ಲಿಖಿತ ಮತ್ತೆರಡು ಹಂತಗಳು ಮೌಖಿಕ ಸಂದರ್ಶನದ ಮೂಲಕ ನಡೆದಿದ್ದು , ವಿದ್ಯಾರ್ಥಿಗಳ ಆಸಕ್ತಿಯ ಕ್ಷೇತ್ರದ ಮೇಲೆ ಆಯ್ಕೆ ನಡೆಯುತ್ತದೆ. ಅಚಲ್ ಬಿಳಿನೆಲೆ ಪಕ್ಕ ವಾದ್ಯಗಳಾದ ಕೀಬೋರ್ಡ್ ಮತ್ತು ಹಾರ್ಮೋನಿಯಮ್ ಕ್ಷೇತ್ರದಲ್ಲಿ ಸಂದರ್ಶನವನ್ನು ಎದುರಿಸಿದ್ದು ಮುಂದೆ ಒಂದು ತಿಂಗಳ ಶಿಬಿರದಲ್ಲಿ ಓರ್ವ ನುರಿತ ಗುರುಗಳ ಜೊತೆಗೆ ಸಂಪೂರ್ಣವಾಗಿ ಹಿಂದಿನ ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ವ್ಯಾಸಂಗ ಮಾಡುವ ಅವಕಾಶವಿದೆ.
ಇವರು ಕೀಬೋರ್ಡ್ ನ್ನು ಡಾ. ದಿನೇಶ್ ರಾವ್ ಅವರಲ್ಲಿ ಅಭ್ಯಸಿಸಿದ್ದು ಜೂನಿಯರ್ ಪೂರ್ಣಗೊಳಿಸಿದ್ದಾರೆ. ಹಾರ್ಮೋನಿಯಮ್ ನ್ನು ಮುಡಿಪುವಿನ ಜವಾಹರ್ ನವೋದಯ ವಿದ್ಯಾ ಸಂಸ್ಥೆ ಯ ಸಂಗೀತ ಶಿಕ್ಷಕರಾದ ಶ್ರೀಮತಿ ಮಾಲಾ ಸೊನ್ನದ್ ಅವರಲ್ಲಿ ಅಭ್ಯಸಿಸಿರುತ್ತಾರೆ. ರೋಟರಿ ಆಂಗ್ಲ ಮಾಧ್ಯಮಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ಮುಡಿಪುವಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಪ್ರಸ್ತುತ ವರ್ಷ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ಪೂರ್ಣ ಗೊಳಿಸಿರುವ ಇವರು ಉಪನ್ಯಾಸಕರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಡಾ.ಅನುರಾಧಾ ಕುರುಂಜಿ ಹಾಗೂ ಚಂದ್ರಶೇಖರ ಬಿಳಿನೆಲೆಯವರ ಪುತ್ರ.
ಸ್ಪಿಕ್ ಮೆಕೆ ಗುರುಕುಲ್ ಅನುಭವ್ ಸ್ಕಾಲರ್ ಶಿಪ್ 2025”ಕ್ಕೆ ಅಚಲ್ ಬಿಳಿನೆಲೆ ಆಯ್ಕೆ
