ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ಹಿಂದೂಗಳ ಮೇಲೆ ನಡೆಸಿದ ಹೇಯ ಕೃತ್ಯವನ್ನೂ ಸಹ ರಾಜಕೀಯಗೊಳಿಸಿ ಮಾತನಾಡಿದ ಉದಯ್ ಆಚಾರ್ಯ ಎಂಬವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕುರಿತು ಸುಳ್ಯ ಮಂಡಲ ಬಿಜೆಪಿ ಯುವ ಮೋರ್ಚಾ ವತಿಯಿಂದ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು
ಇಡೀ ದೇಶವೇ ಒಕ್ಕೊರಲಿನಿಂದ ಭಯೋತ್ಪಾದಕರ ಕೃತ್ಯವನ್ನು ಖಂಡಿಸಬೇಕಿರುವ ಈ ಸಂದರ್ಭದಲ್ಲಿಯೂ ಕೊಳಕು ಮನಸ್ಥಿತಿ ಪ್ರದರ್ಶಿಸಿರುವುದು ದುರದೃಷ್ಟಕರವಾಗಿದ್ದು ಕೂಡಲೇ ಇಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಯುವ ಮೋರ್ಚಾ ಸುಳ್ಯ ಮಂಡಲ ವತಿಯಿಂದ ಪೊಲೀಸ್ ಆಯುಕ್ತರನ್ನು ಆಗ್ರಹಿಸಿತು
ಈ ಸಂದರ್ಭದಲ್ಲಿ ಸುಳ್ಯ ಮಂಡಲದ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀಕಾಂತ್ ಮಾವಿನಕಟ್ಟೆ , ಉಪಾಧ್ಯಕ್ಷ ಸುನಿಲ್ ಕೇರ್ಪಳ, ಕಾರ್ಯದರ್ಶಿ ನಿಕೇಶ್ ಉಬರಡ್ಕ, ಕಾರ್ಯದರ್ಶಿ ನಿಕಿಲ್ ಐವರ್ನಾಡು, ಅಶೋಕ್ ಅಡ್ಕರ್, ಗಣೇಶ್ ಐವರ್ನಾಡು, ಯತೀಶ್ ಐವರ್ನಾಡು ಸೇರಿದಂತೆ ಯುವ ಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು.