ಲಾಯಿಲ ಟಿ.ಬಿ ಕ್ರಾಸ್ ಬಳಿ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಬೈಕ್ ಅನ್ನು ಕಳ್ಳತನ ಮಾಡಿದ ಘಟನೆ ನಡೆದಿದ್ದು ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಟಿ.ಬಿ ಕ್ರಾಸ್ ಹಳೆಪೇಟೆ ನಿವಾಸಿ ವರದರಾಜ ಹೆಗ್ಡೆ ಎಂಬರ ಮನೆಯ ಅಂಗಳದಿಂದಲೇ ಬೈಕ್ ಕಳ್ಳತನವಾಗಿದೆ.
ವರದರಾಜ ಹೆಗ್ಡೆ ಅವರು ಸೇಲ್ಸ್ ಮ್ಯಾನ್ ಕೆಲಸ ಮಾಡಿಕೊಂಡಿದ್ದು ಏ.25ರಂದು ಕೆಲಸ ಮುಗಿಸಿ ಬಂದು ರಾತ್ರಿಯ ವೇಳೆ ಮನೆಯ ಹೊರಗೆ ಶೆಡ್ ನಲ್ಲಿ ತನ್ನ ಕೆ.ಎ 70 E 1651ನಂಬರಿನ ಸುಜುಕಿ ಕಂಪೆನಿಯ ಮೋಟಾರ್ ಸೈಕಲ್ ಅನ್ನು ನಿಲ್ಲಿಸಿದ್ದರು. ಏ.26ರಂದು ಬೆಳಗ್ಗೆ ಎದ್ದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ನೆರಮೆಕೆರೆಯಲ್ಲಿ ಹುಡುಕಾಡಿದರೂ ಬೈಕ್ ಪತ್ತೆಯಾಗದ ಹಿನ್ನಲೆಯಲ್ಲಿ ಬೆಳ್ತಂಗಡಿ ಪೊಲೀಸರಿಗೆ ಏ.26 ರಂದು ದೂರು ನೀಡಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ
ಅಂಗಳದಲ್ಲಿ ನಿಲ್ಲಿಸಿದ್ದ ಬೈಕ್ ಕಳವು
