ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರನ್ನು ಗುರುವಾರ ಸಂಜೆ ದುಷ್ಕರ್ಮಿಗಳು ಬಜ್ಜೆ ಸಮೀಪ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಘಟನೆಯನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸಿದೆ. ಸಂಘಟನೆ ಇಂದು ದ.ಕ ಜಿಲ್ಲೆಯಲ್ಲಿ ಬಂದ್ ಗೆ ಕರೆ ನೀಡಿದ ಹಿನ್ನಲೆಯಲ್ಲಿ ಸುಳ್ಯ ಪೇಟೆ ಕೂಡ ಬಹುತೇಕ ಸಂಪೂರ್ಣ ಬಂದ್ ಆಗಿದೆ.
ಬಿ.ಜೆ.ಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ವಿಶ್ವಹಿಂದೂ ಪರಿಷತ್ ನಾಯಕ ಸೋಮಶೇಖರ ಪೈಕ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ ಮತ್ತಿತರರ ಮುಂದಾಳತ್ವದಲ್ಲಿ ಗಾಂಧಿನಗರದಿಂದ ಶ್ರೀರಾಮಪೇಟೆಯ ವರೆಗೆ ಪಾದಯಾತ್ರೆ ನಡೆಸಿ ಬಂದ್ ಮಾಡಿರದ ಅಂಗಡಿಗಳನ್ನು ಬಂದ್ ಮಾಡಿಸಿದರು.
ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಖಂಡಿಸಿ ಸುಳ್ಯ ಪೇಟೆ ಬಹುತೇಕ ಬಂದ್
