ಮೇ.18 ರಂದು ಕೇಶವ ಕೃಪಾ ವೇದ ಯೋಗ ಕಲಾ ಶಿಬಿರದ ಸಮಾಪನಾ ಸಮಾರಂಭ ಮತ್ತು ಕೇಶವಸ್ಮೃತಿ ಪ್ರಶಸ್ತಿ ಪ್ರದಾನ ಸಮಾರಂಭ ಸುಳ್ಯದ ಶಿವಕೃಪಾ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಶ್ರೀ ಕೇಶವ ಕೃಪಾ ವೇದ ಕಲಾ ಪ್ರತಿಷ್ಠಾನ ಅಧ್ಯಕ್ಷ ವೇದ ಮೂರ್ತಿ ಪುರೋಹಿತ ನಾಗರಾಜ್ ಭಟ್ ತಿಳಿಸಿದ್ದಾರೆ.ಅವರು ಮೇ.13ರಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಶ್ರೀ ಕೇಶವ ಕೃಪಾ ವೇದ-ಯೋಗ – ಕಲಾ ಶಿಬಿರವು ರಜತ ಸಂಭ್ರಮದಲ್ಲಿದ್ದು, ಸಾರ್ಥಕ 25 ವರ್ಷಗಳನ್ನು ಪೂರೈಸಿದೆ ಏ. 20 ರಿಂದ ಆರಂಭವಾದ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತ್ತಿದ್ದು, ಈ ಬಾರಿ 200 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ, ಇದೇ ಶಿಬಿರದಲ್ಲಿ ಮೂರು ವರ್ಷಗಳನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ಅಗ್ನಿ ಮುಖಪ್ರಯೋಗ ಹಾಗೂ ದುರ್ಗಾಸಪ್ತಶತೀ ಪಾಠಗಳನ್ನು ಅಳವಡಿಸಿಕೊಳ್ಳಲಾಗುತ್ತದೆ ಋಗ್ವೇದ ಹಾಗೂ ಯಜುರ್ವೇದ ವಿಭಾಗಗಳಲ್ಲಿ ಒಟ್ಟು 6 ತರಗತಿಗಳು ನಡೆದಿದ್ದು, ರಾಜ್ಯದ ಪ್ರಸಿದ್ಧ ವೇದ ವಿದ್ವಾಂಸರು,ಕಲಾ ತಜ್ಞರು, ಯೋಗ ಶಿಕ್ಷಕರು, ಅಧ್ಯಾಪಕರಾಗಿ ಭಾಗವಹಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದ ಶ್ರೀಕೇಶವಕೃಪಾ ವೇದ ಶಿಬಿರಕ್ಕೆ ವರ್ಷದಿಂದ ವರ್ಷಕ್ಕೆ ದಾಖಲೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅವಕಾಶಕ್ಕಾಗಿ ಹೆಸರು ನೋಂದಾಯಿಸುತ್ತಿದ್ದಾರೆ ಎಂದು ತಿಳಿಸಿದರು.
ಮೇ 18. ಭಾನುವಾರವಾರ ಸಾಯಂಕಾಲ ಗಂಟೆ 3.00 ಕ್ಕೆ ಸಮಾಪನಾ ಸಮಾರಂಭ ನಡೆಯಲಿದ್ದು, ಸಮಾರಂಭದಲ್ಲಿ ಸಮಾಪನಾ ಸಮಾರಂಭ ಹಾಗೂ ಕೇಶವಸ್ಕೃತಿ ಪ್ರಶಸ್ತಿಪ್ರದಾನ ಸಮಾರಂಭ ನಡೆಯಲಿದೆ. ಸಮಾರಂಭದಲ್ಲಿ ಆರ್ಶೀವಚನವನ್ನು ಸುಬ್ರಹ್ಮಣ್ಯ ಮಠದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ಮಾಡಲಿದ್ದು, ಬೆಂಗಳೂರಿನ ಖ್ಯಾತ ಆರ್ಯುವೇದದ ವೈದ್ಯರಾದ ಡಾ. ಗಿರಿಧರ ಕಜೆಯವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.ಕೇಶವಸ್ಮೃತಿ ಪ್ರಶಸ್ತಿಗೆ ಭಾಜನರಾದ ಶ್ರೀ ವೆಂಕಟೇಶ್ವರ ಶಾಸ್ತ್ರಿಯವರಿಗೆ ,ಶ್ರೀ ಕೇಶವ ಕಲಾಸ್ಮೃತಿ ಪ್ರಶಸ್ತಿಗೆ ಭಾಜನರಾದ ಕಾಂಚನ ಈಶ್ವರ ಭಟ್ ರವರಿಗೆ,ಶ್ರೀ ಕೇಶವ ಸಾಧನಾ ಪ್ರಶಸ್ತಿಗೆ ಭಾಜನರಾದ
ಡಾ. ಆರ್ ಕೆ ನಾಯರ್ ರವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಿದ್ದಾರೆ. ಸನ್ಮಾನಿತರ ಬಗ್ಗೆ ಅಭಿನಂದನಾ ಭಾಷಣವನ್ನು ಬೆಳಾಲು ಧ.ಮಂ.ಕಾಲೇಜಿನ ನಿವೃತ್ತ ಶಿಕ್ಷಕ ರಾಮಕೃಷ್ಣ ಭಟ್ ಚೂಂತಾರು ಮಾಡಲಿದ್ದಾರೆ. ಸುಳ್ಯಶಿವಕೃಪಾ ಕಲಾಮಂದಿರದ ಮಾಲಕ ಶ್ರೀ ಹರೀಶ್ ಕುಮಾರ್ ಕೆ. ಇವರು ಮುಖ್ಯ ಅಭ್ಯಾಗತರಾಗಿ ಶುಭಾಶಂಸನೆ ಮಾಡಲಿದ್ದಾರೆ. ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್ ವಗೆನಾಡು ಉಪಸ್ಥಿತರಿದ್ದು ಶುಭ ಹಾರೈಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್, ಗುರುಗಳಾದ ವೇದ ಮೂರ್ತಿ ಸುದರ್ಶನ್ ಭಟ್ ಉಜಿರೆ, ಹಿರಿಯ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಶ್ರೀ ಬಲರಾಮ ಭಟ್ ಶಿವನಿವಾಸ, ಶಿಬಿರದ ಪ್ರಬಂಧಕಿ ಕು! ಯಶಸ್ವಿ ಮುಂಡಕಜೆ ಉಪಸ್ಥಿತರಿದ್ದರು.
ಮೇ.18 ರಂದು ಕೇಶವ ಕೃಪಾ ವೇದ ಯೋಗ ಕಲಾ ಶಿಬಿರದ ಸಮಾಪನಾ ಸಮಾರಂಭ ಮತ್ತು ಕೇಶವಸ್ಮೃತಿ ಪ್ರಶಸ್ತಿ ಪ್ರದಾನ ಸಮಾರಂಭ
