ಮುಂದಿನ ಶೈಕ್ಷಣಿಕ ವರ್ಷದಿಂದ ಆನ್‌ಲೈನ್ ಹಾಜರಾತಿ ದಾಖಲಿಸಲು ಹೊಸ ಆ್ಯಪ್ ಅನ್ನು ಶಿಕ್ಷಣ ಇಲಾಖೆ ಅಭಿವೃದ್ಧಿಪಡಿಸಿದೆ. ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಮಂತ್ರಿಗಳು ಇದನ್ನು ಲೋಕಾರ್ಪಣೆ ಮಾಡಲಿದ್ದಾರೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಿಸುವಾಗ ಶಿಕ್ಷಣ ಸಚಿವರು ಇದರ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿರುವರು ಎಂದು ಕಲಬುರಗಿ ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ಡಾ. ಅಕಾಶ್ ಎಸ್. ಹೇಳುತ್ತಾರೆ. ಆ್ಯಪ್ ಆಧಾರಿತ ಶಿಕ್ಷಕರ ಹಾಜರಾತಿ ಸಿಕ್ಕಿಂನಲ್ಲಿ ಇದು ಜಾರಿಯಲ್ಲಿದ್ದು, ಯಶಸ್ವಿಯೂ ಆಗಿದೆ. ಪ್ರಧಾನಿಗಳು ಇದಕ್ಕೆ ಪ್ರಶಸ್ತಿಯೂ ನೀಡಿದ್ದಾರೆ. ಎಲ್ಲ ಶಿಕ್ಷಕರು ಸ್ಮಾರ್ಟ್ ಫೋನ್ ಬಳಸುತ್ತಾರೆ. ಒಬ್ಬರಲ್ಲಿ ಫೋನ್ ಇದ್ದರೆ ಸಾಕು ಮುಖ್ಯಗುರು ಸೇರಿ ಎಲ್ಲ ಶಿಕ್ಷಕರ ಫೋಟೋ ಕ್ಲಿಕ್ ಮಾಡಿದರೆ ಹಾಜರಾತಿ ಅಪ್ ಡೇಟ್ ಆಗುತ್ತದೆ. ಮಕ್ಕಳ ಚಿತ್ರವೂ ತೆಗೆದು ಅಪ್‌ಲೋಡ್ ಮಾಡಬೇಕು. ಶಿಕ್ಷಕರ ಮತ್ತು ಮಕ್ಕಳ ಮುಖಗಳನ್ನು ಮೊದಲೇ ಆ್ಯಪ್ ನಲ್ಲಿ ಸೇರಿಸಲಾಗಿರುತ್ತದೆ. ಹೀಗಾದರೆ ಯಾವ ಶಿಕ್ಷಕರು ಎಷ್ಟು ಗಂಟೆಗೆ ಬಂದರು, ಎಷ್ಟು ಜನ ಮಕ್ಕಳು ಹಾಜರಾಗಿದ್ದಾರೆ, ಬಿಸಿಯೂಟ ಎಷ್ಟು ಜನ ಸೇವಿಸಿದ್ದಾರೆ ಎಲ್ಲವೂ ದಾಖಲಾ ಗುತ್ತದೆ. ಕಲಬುರಗಿ ಸೇರಿ ಕಲ್ಯಾಣ ಕರ್ನಾಟಕದ ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಸದೇ ಬೇರೆ ಮಾರ್ಗ ಇಲ್ಲ ಎಂದಿದ್ದಾರೆ
ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ಹಾಜರಾತಿಗೆ ಹೊಸ ಆ್ಯಪ್
