ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು
ದಿನಗಳಿಂದ ಭಾರೀ ಗಾಳಿ ಮಳೆಯಾಗುತ್ತಿದ್ದು, ಕಾರ್ಮಿಕ ಮಹಿಳೆಯ ಮೇಲೆ ಮರ ಬಿದ್ದು ಕಾರ್ಮಿಕ ಮಹಿಳೆ ಮೃತಪಟ್ಟಿರುವ ಘಟನೆ ವಿರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದಲ್ಲಿ ನಡೆದಿದೆ.
ಲೈನ್ ಮನೆಯಲ್ಲಿ ವಾಸವಿದ್ದ ಮಹಿಳೆ ಗೌರಿ (52) ಎಂಬವರೇ ಮೃತ ದುರ್ದೈವಿ. ಮನೆಯಿಂದ ಹೊರ ಬಂದಾಗ ಮರ ಬಿದ್ದಿದ್ದು, ಮರದಡಿ ಸಿಲುಕಿಕೊಂಡು ಗೌರಿ ಮೃತಪಟ್ಟರು, ಮನೆಗೂ ಹಾನಿಯಾಗಿದೆ.
ಭಾರೀ ಗಾಳಿ ಮಳೆಗೆ ಕಾರ್ಮಿಕ ಮಹಿಳೆಯ ಮೇಲೆ ಮರ ಬಿದ್ದು ಮಹಿಳೆ ಸಾವು
