ಬೈಕ್ ಗೆ ಕೆ.ಆರ್.ಟಿ.ಸಿ‌ ಬಸ್ಸು ಡಿಕ್ಕಿ ಹೊಡೆದು ಬೈಕ್ ಸವಾರ ಸಾವು

ಕಡಬದ ಸಮೀಪದ ಹಳೆಸ್ಟೇಷನ್‌ ಎಂಬಲ್ಲಿ ಕೆಎಸ್ಸಾರ್ಟಿಸಿ ಬಸ್ಸು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ.
ಮೃತಪಟ್ಟ ಯುವಕನನ್ನು ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಉದೇರಿ ನಿವಾಸಿ ದಿ. ಶ್ರೀಧರ ಗೌಡ ಎಂಬವರ ಪುತ್ರ ಬಿಶ್ವಜಿತ್(23) ಎಂದು ತಿಳಿದು ಬಂದಿದೆ‌
ಯುವಕ ಮರ್ಧಾಳದ ಪಾಲತ್ತಡ್ಕದಲ್ಲಿ ಫ್ಯಾಬ್ರಿಕೇಷನ್ ವೃತ್ತಿ ಮಾಡುತ್ತಿದ್ದು.ಎಂದಿನಂತೆ ಕೆಲಸ ಮುಗಿಸಿ ಮನೆಗೆ ಹೊರಟು ಕಡಬ ಕಡೆ ಬೈಕಿನಲ್ಲಿ ಬರುತ್ತಿದ್ದಾಗ ಹಳೆಸ್ಟೇಷನ್ ಬಳಿ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಒಮ್ಮಿ ಕಾರೊಂದನ್ನು ಓವರ್ ಟೇಕ್ ಮಾಡಿ ಹೋಗುವಾಗ ಎದುರಿನಿಂದ ಬರುತ್ತಿದ್ದ ಬಿಶ್ವಜಿತ್ ಚಲಾಯಿಸುತ್ತಿದ್ದ ಬೈಕ್‌ ಗೆ ಡಿಕ್ಕಿ ಹೊಡೆದಿದೆ. ಕಡಬ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಯುವಕ ಮೃತಪಟ್ಟಿದ್ದಾನೆ.
ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top