ಬೈಕ್ ಸವಾರನ ಮೇಲೆ‌ ಕಾಡಾನೆ ದಾಳಿ ಮಾಡಿ ಬೈಕ್ ಸವಾರ ಗಂಭೀರ

ಬೈಕ್ ಸವಾರನೋರ್ವನ‌ ಮೇಲೆ ಕಾಡಾನೆಯೊಂದು ದಾಳಿ ನಡೆಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕೊಳಗಾಮೆ ಬಳಿ ನಡೆದಿದೆ.
ಕಾಫಿ ಎಸ್ಟೇಟ್ ನಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದ ಸುಬ್ರಮಣ್ಯ ಎಂಬವರು ಆನೆ ದಾಳಿಗೊಳಗಾದ ವ್ಯಕ್ತಿಯಾಗಿದ್ದು, ಕಾಡಾನೆ ದಾಳಿಯಿಂದಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾಫಿ ಎಸ್ಟೇಟಿಗೆ ಸುಬ್ರಮಣ್ಯ ತೆರಳುತ್ತಿದ್ದ ವೇಳೆ ಏಕಾಏಕಿ ಎದುರಾದ ಕಾಡಾನೆ ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಬೈಕ್ ಚಲಾಯಿಸುತ್ತಿದ್ದ ಸುಬ್ರಮಣ್ಯ ನೆಲಕ್ಕೆ ಬಿದ್ದಿದ್ದು, ಈ ವೇಳೆ ಸುಬ್ರಮಣ್ಯನ ಹೊಟ್ಟೆಗೆ ಕಾಡಾನೆ ಬಲವಾಗಿ ತಿವಿದಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top