ಬದಿಯಡ್ಕ ತನ್ನ ಮನೆಯಿಂದ ನಾಪತ್ತೆಯಾಗಿದ್ದ ಯುವತಿ ಪ್ರತೀಕ್ಷಾ (19 ವರ್ಷ)ಇದೀಗ ತನ್ನ ಪ್ರಿಯಕರನೆಂದು ಹೇಳಲಾದ ಕಾಸರಗೋಡಿನ ಆಶಿಕ್ ಅಲಿ ಎಂಬಾತನೊಂದಿಗೆ ಪತ್ತೆಯಾಗಿದ್ದಾಳೆ. ಪೊಲೀಸರು ಯುವತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು. ನ್ಯಾಯಾಲಯದ ಅನುಮತಿಯ ಮೇರೆಗೆ ಆಕೆ ತನ್ನ ಪ್ರಿಯಕರನೊಂದಿಗೆ ತೆರಳಿದ್ದಾಳೆ.
ಮೇ 27 ರಂದು, ಮಂಗಳವಾರ, ಬೆಳಗ್ಗೆ ಸುಮಾರು 10 ಗಂಟೆಗೆ ಪ್ರತೀಕ್ಷಾ ತನ್ನ ಸ್ನೇಹಿತೆಯ ಮನೆಗೆ ಹೋಗುವುದಾಗಿ ಮನೆಯವರಿಗೆ ತಿಳಿಸಿ ಹೋಗಿದ್ದಳು. ಆಕೆ ಮನೆಗೆ ಹಿಂತಿರುಗದ ಕಾರಣ ಆತಂಕಗೊಂಡ ಆಕೆಯ ಸಂಬಂಧಿಕರು ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ನಾಪತ್ತೆಯಾಗಿದ್ದ ಪ್ರತೀಕ್ಷಾ ಪ್ರಿಯಕರ ಆಶಿಕ್ ಆಲಿಯೊಂದಿಗೆ ಪತ್ತೆ!
